ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ಶತಾಮೃತ ವಾಣಿಜ್ಯ ಸಂಕೀರ್ಣದಲ್ಲಿ ಬ್ಯಾಂಕ್ ಆಫ್ ಬರೋಡ ಗ್ರಾಹಕ ಸೇವಾ ಕೇಂದ್ರ ಜ.10 ರಂದು ಶುಭಾರಂಭಗೊಂಡಿತು.

ಇಡ್ಕಿದು ಗ್ರಾಮದಲ್ಲಿ ಹಲವು ವರ್ಷಗಳಿಂದ ಬ್ಯಾಂಕ್ ಆಫ್ ಬರೋಡ (ವಿಜಯ ಬ್ಯಾಂಕ್) ಸೇವೆ ಸಲ್ಲಿಸ್ತಾ ಇತ್ತು ಕಾರಣಾಂತರದಿಂದ ಬ್ಯಾಂಕ್ ಆಫ್ ಬರೋಡದ ಶಾಖೆ ವಿಟ್ಲಕ್ಕೆ ಸ್ಥಳಾಂತರಗೊಂಡು ಗ್ರಾಹಕರು ವಿಟ್ಲಕ್ಕೆ ಹೋಗಿ ವ್ಯವರಿಸಬೇಕಿತ್ತು. ಆದರೆ ಈ ದಿನದಿಂದ ಇಡ್ಕಿದು ಗ್ರಾಮದ ಹಾಗೂ ಆಸುಪಾಸಿನ ಎಲ್ಲಾ ಗ್ರಾಮದ ಗ್ರಾಹಕರು ಇಡ್ಕಿದು ಬ್ಯಾಂಕ್ ಆಫ್ ಬರೋಡ ಗ್ರಾಹಕ ಸೇವಾಕೇಂದ್ರದಲ್ಲಿ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳನ್ನು ಸದುಪಯೋಗಸಬೇಕಾಗಿ ವಿಟ್ಲದ ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕರಾದ ಧೀರಜ್ ಶೆಟ್ಟಿ ಗ್ರಾಹಕರಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾ ಅಧಿಕಾರಿಯಾದ ಈಶ್ವರ್ ನಾಯ್ಕ್ ಹಾಗೂ ಐರಿಕ್ಸ್ ಟೆಕ್ನಾಲಜಿ ವ್ಯವಸ್ಥಾಪಕರಾದ ರಂಜಿತ್ ಮತ್ತು ಗ್ರಾಹಕ ಸೇವಾ ಕೇಂದ್ರದ ರಕ್ಷಿತಾ, ಸನತ್ ಉಪಸ್ಥಿತರಿದ್ದರು.




























