ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಗ್ರಂಥಪಾಲಕರ ಹುದ್ದೆಯನ್ನು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಖ್ಯೆ 200ಕ್ಕಿಂತ ಕಡಿಮೆ ಇದೆ ಎಂಬ ಕಾರಣಕ್ಕೆ ವರ್ಗಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳೆಲ್ಲರೂ ಸೇರಿ ಶಾಸಕ ಸಂಜೀವ ಮಠಂದೂರು ರವರನ್ನು ಭೇಟಿಯಾಗಿ ಆ ಎರಡೂ ಹುದ್ದೆಗಳನ್ನು ಕಾಲೇಜಿನಲ್ಲಿ ಉಳಿಸುವಂತೆ ಮನವಿ ಮಾಡಿದರು.

ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಗ್ರಂಥಪಾಲಕರ ಹುದ್ದೆಗಳನ್ನು ಕಾಲೇಜಿನಿಂದ ವರ್ಗಾಯಿಸಿದರೆ ಕ್ರೀಡೆಯನ್ನು ನಂಬಿ ಬಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂದು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಿಳಿಸಿದರು. ಹೀಗೇ ಮುಂದುವರೆದರೆ ಮುಂದೆ ಕಾಲೇಜು ಮುಚ್ಚುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೀತ್, ಕಾರ್ಯದರ್ಶಿ ಭಾರತಿ, ಜೊತೆ ಕಾರ್ಯದರ್ಶಿ ವಿಖ್ಯಾತ್, ಕ್ರೀಡಾ ಕಾರ್ಯದರ್ಶಿ ನರೇಂದ್ರ ಮತ್ತು ಕಾಲೇಜಿನ 50 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



























