ಸುರತ್ಕಲ್ : ಬಸ್ ನಿಲ್ದಾಣ ಸನಿಹದಲ್ಲಿ ಮೂರು ವರ್ಷದ ಮಗುವೊಂದು ಸಾರ್ವಜನಿಕರಿಗೆ ಪತ್ತೆಯಾಗಿದ್ದು, ತಾಯಿಯಿಂದ ಬೇರ್ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸಾರ್ವಜನಿಕರು ಮಗುವನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಮಗು ಬೋಳು ತಲೆಯಲ್ಲಿದ್ದು, ಗುಲಾಬಿ ಬಣ್ಣದ ಅಂಗಿ ಧರಿಸಿದೆ.
ಮಗುವಿನ ಪೋಷಕರನ್ನು ಪತ್ತೆ ಹಚ್ಚಲು ಸಾರ್ವಜನಿಕರು ಪೊಲೀಸರಿಗೆ ಕೋರಿದ್ದು, ಮಗುವನ್ನು ಕಳೆದುಕೊಂಡ ಪೋಷಕರು ಸುರತ್ಕಲ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಸುರತ್ಕಲ್ ಠಾಣಾ ಫೋನ್ ನಂಬರ್- 08242220540
ಪೊಲೀಸ್ ನಿರೀಕ್ಷಕರ ಮೊಬೈಲ್ ನಂಬರ್- 9480805360
ಪೊಲೀಸ್ ಉಪನಿರೀಕ್ಷಕರು ಮೊಬೈಲ್ ನಂಬರ್- 9480802344
ನಗರ ನಿಸ್ತಂತು ನಿಯಂತ್ರಣ ಕೊಠಡಿ ಮಂಗಳೂರು ನಗರ ಫೋನ್ ನಂಬರ್- 9480802321 ಮಹಿಳಾ ಸಮನ್ವಯ ಅಧಿಕಾರಿ -9448332713





























