ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ( ರಿ) ಬೆಳ್ತಂಗಡಿ ಇದರ 15 ನೇ ಅರಸಿನಮಕ್ಕಿ ಶಾಖೆಯು ಪ್ರಥಮ ವರ್ಷವನ್ನು ಪೂರೈಸಿ 2 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಸಂಘದ ಅತ್ಯುತ್ತಮ ಬೆಳವಣಿಗೆಗೆ ಕಾರಣರಾದ ಗ್ರಾಹಕರೊಂದಿಗೆ ಮುಕ್ತವಾಗಿ ಬೆರೆಯಲು ‘ಗ್ರಾಹಕರೊಂದಿಗೆ ಒಂದು ದಿನ’ ಕಾರ್ಯಕ್ರಮ ಅರಸಿನಮಕ್ಕಿ ಶಾಖಾ ಕಚೇರಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಪದ್ಮನಾಭ ಮಣಿಂಜ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಹಕರೇ ಬ್ಯಾಂಕಿನ ಆಸ್ತಿಯಾಗಿದ್ದಾರೆ. ಉತ್ತಮ ರೀತಿಯ ಸೇವೆ ನೀಡುವುದರಲ್ಲಿ ಶ್ರೀ ಗುರುದೇವ ಬ್ಯಾಂಕ್ ಬದ್ಧವಾಗಿದೆ ಹಾಗೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ಯಾವುದೇ ತಡ ಮಾಡದೆ ಕ್ಷಿಪ್ರಾವಾಗಿ ಸಾಲ ವಿತರಣೆ ಮಾಡಲಾಗುವುದು ಎಂದರು.
ಸಹಕಾರಿ ಸಂಘದ ಇನ್ನಷ್ಟು ಬೆಳವಣಿಗೆಗೆ ಗ್ರಾಹಕರ ಹಾಗೂ ಸದಸ್ಯರ ಸಲಹೆಯನ್ನು ಪಡೆದುಕೊಂಡರು..

ವೇದಿಕೆಯಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಶ್ವತ್ ಕುಮಾರ್, ಬ್ಯಾಂಕಿನ ಸ್ಪೆಷಲ್ ಆಫೀಸರ್ ಮೋನಪ್ಪ ಪೂಜಾರಿ ಕಂಡೆತ್ಯಾರು, ಸಂಘದ ನಿರ್ದೇಶಕರಾದ ತನುಜ ಶೇಖರ್, ನೆಚ್ಚಿನ ಗ್ರಾಹಕರಾದ ರಾಮಣ್ಣ ಪೂಜಾರಿ, ಅರಸಿನಮಕ್ಕಿ ಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಸ್ವಾಗತಿಸಿ, ಮೋನಪ್ಪ ಪೂಜಾರಿ ಪ್ರಸ್ತಾವಿಕ ಮಾತನಾಡಿ, ಅರಸಿನಮಕ್ಕಿ ಶಾಖ ವ್ಯವಸ್ಥಾಪಕ ಜಾರಪ್ಪ ಪೂಜಾರಿ ವಂದಿಸಿದರು.