ಸಿಂಗಾರ ಸಿರಿಯಂತೆ ಕಂಗೊಳಿಸುವ ಮೂಲಕ ಎಲ್ಲರ ಮನಸೂರೆಗೊಳ್ಳಬೇಕು ಎಂಬ ಮಹದಾಸೆ ಎಲ್ಲಾ ಹೆಣ್ಣು ಮಕ್ಕಳ ಮನಸ್ಸಿನಲ್ಲಿರುತ್ತದೆ. ಹೆಣ್ಣು ಮಕ್ಕಳು ಎಲ್ಲರೂ ರೂಪವತಿಯಾಗಿಯೇ ಇರುತ್ತಾರೆ ಆದರೇ ಅವರನ್ನು ಮತ್ತಷ್ಟು ಸ್ಪುರದ್ರೂಪಿಯನ್ನಾಗಿಸುವ ಕೈಚಳಕ ‘ಬ್ಯೂಟಿ ಪಾರ್ಲರ್’ ನವರದ್ದಾಗಿದೆ. ಹಾಗಾಗಿ ‘ಬ್ಯೂಟಿ ಪಾರ್ಲರ್’ ಗಳಿಗೆ ವಿಶೇಷ ಸ್ಥಾನವಿದೆ.
ಕಳೆದ ಒಂದು ವರುಷದಿಂದ ತಮ್ಮ ಉತ್ತಮ ಸೇವೆಯ ಮೂಲಕ ಹಲವು ಹೆಣ್ಣು ಮಕ್ಕಳನ್ನು ‘ಲಾವಣ್ಯ’ವತಿಯರನ್ನಾಗಿಸಿದ ‘ಲಾವಣ್ಯ ಹರ್ಬಲ್ ಬ್ಯೂಟಿ ಪಾರ್ಲರ್’ ಇದೀಗ ಎರಡನೇ ವಸಂತಕ್ಕೆ ಪಾದಾರ್ಪಣೆ ಮಾಡಿದೆ.
ದರ್ಬೆಯ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿ ಕಳೆದ ಒಂದು ವರುಷದಿಂದ ಕಾರ್ಯ ನಿರ್ವಹಿಸುತ್ತಿರುವ ‘ತುಳಸಿ ಧನಂಜಯ’ ರವರ ಮಾಲಕತ್ವದ ‘ಲಾವಣ್ಯ ಹರ್ಬಲ್ ಬ್ಯೂಟಿ ಪಾರ್ಲರ್’ ಎರಡನೇ ವರುಷಕ್ಕೆ ಕಾಲಿಟ್ಟಿದ್ದು, ತಮ್ಮ ವಿನೂತನ ಸೇವೆಯ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದೆ.
ಬ್ರೈಡಲ್ ಮೇಕಪ್, ಮೆಹಂದಿ, ಫೇಷಿಯಲ್, ಹೇರ್ ಸ್ಟ್ರೈಟ್ನಿಂಗ್, ವಾಕ್ಸಿಂಗ್, ಪೇಡಿಕ್ಯೂರ್, ಮ್ಯನಿಕ್ಯೂರ್, ಹೇರ್ ಸ್ಮೂಥಿಂಗ್ ನಂತಹ ವಿವಿಧ ಬಗೆಯ ಸೌಂದರ್ಯ ವರ್ಧಕ ಸೌಲಭ್ಯಗಳು ಲಭ್ಯವಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೇವೆ ನೀಡಲಾಗುವುದು ಹಾಗೆಯೇ ಜ.14 ರಿಂದ 31ರ ವರೆಗೆ ಗ್ರಾಹಕರಿಗೆ ವಿಶೇಷ ಆಫರ್ ಕೂಡ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9449517559, 8431751303 ಸಂಪರ್ಕಿಸಬಹುದಾಗಿದೆ..
