ಮೈಸೂರು: ಹತ್ತಾರು ಕೇಸ್ನಲ್ಲಿ ಪೊಲೀಸರಿಗೆ ಬೇಕಿದ್ದ ಸ್ಯಾಂಟ್ರೋ ರವಿಯನ್ನ ಎಷ್ಟು ಹುಡುಕಿದ್ರು ಸಿಕ್ಕಿರಲಿಲ್ಲ. ಬೆಂಗಳೂರು, ಮೈಸೂರು, ರಾಮನಗರ, ಕೊಡಗು ಎಲ್ಲೇ ಜಾಲಾಡಿದ್ರು ಪತ್ತೆ ಆಗಿರಲಿಲ್ಲ. ಖಡಕ್ ಪೊಲೀಸ್ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಖುದ್ದು ಅಖಾಡಕ್ಕೆ ಇಳಿದಿದ್ರು ಅವರಿಗೂ ಈ ಕೇಸ್ ತಲೆನೋವಾಗಿತ್ತು.
ಎಡಿಜಿಪಿ ಅಲೋಕ್ ಕುಮಾರ್ ಸ್ಯಾಂಟ್ರೋ ರವಿ ಬಂಧನಕ್ಕೆ ಸ್ಪೆಷಲ್ ಟೀಮ್ಗಳನ್ನ ರಚಿಸಿದ್ರು. ಕಾರ್ಯಾಚರಣೆಯ ಮಧ್ಯೆ ಶ್ರೀರಂಗಪಟ್ಟಣ ತಾಲೂಕಿನ ನಿಮಿಷಾಂಭ ದೇವಿಗೆ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡಿದ್ರು. ಗುರುವಾರ ಹರಕೆ ಹೊತ್ತು 22 ಗಂಟೆ ಕಳೆಯುವಷ್ಟರಲ್ಲಿ ಪೊಲೀಸರು ಸ್ಯಾಂಟ್ರೋ ರವಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಯಾಂಟ್ರೋ ರವಿ ಸಿಗದೇ ಇದ್ದಿದ್ರೆ ಸರ್ಕಾರ, ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿತ್ತು. ಹೀಗಾಗಿ ಆತ ನಮಗೆ ಬೇಗ ಸಿಗಲಿ ಎಂದು ಅಲೋಕ್ ಕುಮಾರ್, ನಿಮಿಷಾಂಭ ದೇವಿಗೆ ಹರಕೆ ಹೊತ್ತಿದ್ರು.
ಈ ದೇವಿ ಮೇಲೆ ನನಗೆ 12 ವರ್ಷಗಳಿಂದ ಅಪಾರ ನಂಬಿಕೆ ಇದೆ. 2011ರಲ್ಲಿ ಮೈಸೂರಿನಲ್ಲಿ ಡಬಲ್ ಮರ್ಡರ್ ಕೇಸ್ ಆಗಿತ್ತು. ಆಗಲೂ ಬಂದು ನಾನು ದೇವಿಗೆ ಹರಕೆ ಹೊತ್ತಿದ್ದೆ. ಹರಕೆ ಹೊತ್ತು ಪೂಜೆ ಸಲ್ಲಿಸಿ ನಾವು ಮೈಸೂರಿಗೆ ಹೋಗುವುದರೊಳಗಾಗಿ ಅಂದ್ರೆ ಐದೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಲಾಗಿತ್ತು. ಹೀಗಾಗಿ ನಿಮಿಷಾಂಭ ದೇವಿ ಮೇಲೆ ನನಗೆ ಅಪಾರ ನಂಬಿಕೆ ಇದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.




























