ಕೇರಳ: ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮಕರಜ್ಯೋತಿಯೂ ಮೂಡುವ ಮೂಲಕ ಭಕ್ತ ಸಾಗರಕ್ಕೆ ಮಣಿಕಂಠ ಸ್ವಾಮಿ ದರ್ಶನ ನೀಡಿದ್ದಾರೆ.

ಐತಿಹಾಸಿಕ ಶಬರಿಮಲೆ ದೇಗುಲದಲ್ಲಿ ಮಕರಜ್ಯೋತಿ ಕಣ್ತುಂಬಿಕೊಳ್ಳಲು ಸಾವಿರಾರೂ ಭಕ್ತಸಾಗರ ನೆರೆದಿದ್ದು, ಅಯ್ಯಪ್ಪನ ದರ್ಶನದ ಜೊತೆಗೆ ಮಕರಜ್ಯೋತಿ ದರ್ಶನವನ್ನು ಅಯ್ಯಪ್ಪ ಸ್ವಾಮಿ ಭಕ್ತರು ಕಣ್ತುಂಬಿಕೊಂಡರು.
ಇದು ಭಕ್ತಕೋಟಿಗೆ ಒಂದು ಪುಣ್ಯ ಕಾಲ, ಈ ಕ್ಷಣಕ್ಕಾಗಿ ಶ್ರದ್ಧೆ, ಭಕ್ತಿಯಿಂದ ಕಾಯುತ್ತಿದ್ದ ಮಾಲಾಧಾರಿಗಳಿಗೆ ದೇವರೇ ಒಂದು ಬಾರಿ ದರ್ಶನ ನೀಡುವ ಕ್ಷಣ ಇದು. ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂರು ಬಾರಿ ಮಕರಜ್ಯೋತಿ ಮೂಡುತ್ತದೆ. ಮೂಡುವುದು ಮೂಡುವುದು ಮಕರಜ್ಯೋತಿ ಎನ್ನುವ ಹಾಡಿನ ಮೂಲಕ ಭಕ್ತರು ಜ್ಯೋತಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುವ ಮಂತ್ರ ಘೋಷಣೆ ಮೂಲಕ ಈ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ.
ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಈ ಮಕರಜ್ಯೋತಿ ಗೋಚರಿಸುವುದು. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮಣಿಕಂಠನ ರೂಪದಲ್ಲಿ ಈ ಜ್ಯೋತಿ ಮೂಡುವುದು. ಈ ಜ್ಯೋತಿ ಮೂರು ಸಲ ಗೋಚರಿಸಿದೆ. ಮಕರಜ್ಯೋತಿಯನ್ನು ಕಣ್ತುಂಬಿಕೊಳ್ಳಲು ನೆರೆದಿರುವ ಅಯ್ಯಪ್ಪ ಭಕ್ತರಿಗೆ ಇದೊಂದು ಸಂತಸದ ವಾತಾವರಣವನ್ನು ನಿಮಾರ್ಣ ಮಾಡಿದೆ.



























