ಉಪ್ಪಿನಂಗಡಿ: ಗೋಳಿತೊಟ್ಟು ಗ್ರಾಮದ ಕಲಾಯಿಲ್ ನಿವಾಸಿ ಜಿಜಿನ್ ಅಬ್ರಹಾಂ ಅಲಿಯಾಸ್ ಜಿಜಿಕೆಎ ಎಂಬವರ ಮನೆಗೆ ಕಳ್ಳರು ನುಗ್ಗಿ 5.87 ಲಕ್ಷ ರೂ. ಮೌಲ್ಯದ ನಗ ನಗದು ಸೊತ್ತುಗಳನ್ನು ಕಳವುಗೈದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಜಿಜಿನ್ ಅವರು ಪತ್ನಿ, ಮಕ್ಕಳನ್ನು ಕೊಣಾಲು ಗ್ರಾಮದ ಆರ್ಲದ ಮನೆಯಲ್ಲಿ ಬಿಟ್ಟು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಮಾವನ ಆರೈಕೆಗಾಗಿ ಶುಕ್ರವಾರ ಹೋಗಿದ್ದು, ಶನಿವಾರ ಮನೆಗೆ ಮರಳಿದಾಗ ಕಳವು ಕೃತ್ಯ ಗಮನಕ್ಕೆ ಬಂದಿತು.
4.65 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಪೆಟ್ಟಿಗೆ, 50 ಸಾವಿರ ರೂ. ನಗದು ಜಮೀನಿನ ದಾಖಲೆ ಪತ್ರಗಳು, ಟಿವಿ, ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್ ಸಹಿತ ಒಟ್ಟು 5.87 ಲಕ್ಷ ರೂ. ಕಳವಾಗಿದೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬೆರಳಚ್ಚು ಹಾಗೂ ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿದೆ. ಉಪ್ಪಿನಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ..



























