ಪುತ್ತೂರು: ಓಂ ಫ್ರೆಂಡ್ಸ್ ಮುಳಿಯ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ‘ಓಂ ಫ್ರೆಂಡ್ಸ್ ಮುಳಿಯ ಟ್ರೋಫಿ-2023’ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ-2023 ಜ.25 ರಂದು ರಾತ್ರಿ 8 ಗಂಟೆಯಿಂದ ಮುಳಿಯ ಶಾಲಾ ಆವರಣದಲ್ಲಿ ನಡೆಯಲಿದೆ.
ಪ್ರಥಮ ಬಹುಮಾನ- 15,555 ಮತ್ತು ಓಂ ಫ್ರೆಂಡ್ಸ್ ಟ್ರೋಫಿ, ದ್ವಿತೀಯ ಬಹುಮಾನ- 9,999 ಮತ್ತು ಓಂ ಫ್ರೆಂಡ್ಸ್ ಟ್ರೋಫಿ, ತೃತೀಯ ಬಹುಮಾನ – 4,444 ಮತ್ತು ಓಂ ಫ್ರೆಂಡ್ಸ್ ಟ್ರೋಫಿ, ಚತುರ್ಥ ಬಹುಮಾನ- 4,444 ಮತ್ತು ಓಂ ಫ್ರೆಂಡ್ಸ್ ಟ್ರೋಫಿ.
ಜ.24 ರ ಸಂಜೆ 7 ಗಂಟೆಯ ಒಳಗೆ ತಂಡವನ್ನು ನೋಂದಾಯಿಸಬೇಕು. ಪ್ರವೇಶ ಶುಲ್ಕ 700 ರೂ., ತೀರ್ಪುಗಾರರ ಹಾಗೂ ವ್ಯವಸ್ಥಾಪಕರ ತೀರ್ಮಾನವೇ ಅಂತಿಮ. ಚರ್ಚೆಗೆ ಆಸ್ಪದವಿಲ್ಲ. ಹೆಚ್ಚಿನ ಮಾಹಿತಿಗಾಗಿ 9449750894, 9148301695 ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..




























