ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ
ಪುಷ್ಕರಣೆಯ ಈಶಾನ್ಯ ಭಾಗದಲ್ಲಿರುವ ನೂರಾರು ವರ್ಷದ
ಇತಿಹಾಸವಿರುವ ಅಶ್ವತ್ಥಮರವೊಂದು ನಡುವೆ ಮುರಿತಗೊಂಡ ಘಟನೆ ಜ.15ರ ತಡರಾತ್ರಿ ನಡೆದಿದೆ.
ಪುಷ್ಕರಣಿಯ ಬಳಿಯ ಈ ಅಶ್ವತ್ಥಮರದ ಕಟ್ಟೆಯಲ್ಲಿ ಜಾತ್ರೆಯ ಸಂದರ್ಭ ಶ್ರೀ ದೇವರು ಪೂಜೆ ಸ್ವೀಕರಿಸುತ್ತಾರೆ.

ಅಶ್ವತ್ಥ ಮರದ ಪಕ್ಕದಲ್ಲಿ ಅಂಗಣತಾಯ ದೈವ ನರ್ತನ
ಸೇವೆ ನಡೆಯುತ್ತದೆ. ಕಳೆದ ಬಾರಿ ಇದೇ ಅಶ್ವತ್ಥ ಮರದ ಗೆಲ್ಲು ಮುರಿದು ಪುಷ್ಕರಣಿಯ ಆವರಣಕ್ಕೆ ಹಾನಿಯಾಗಿತ್ತು. ಇದೀಗ ಮರ ನಡು ಭಾಗದಲ್ಲಿ ಮುರಿದಿದ್ದು, ಮುಂಭಾಗದ ಭಾರಿ ಗಾತ್ರದ ಗೆಲ್ಲುಗಳು ಧರೆಗುರುಳಿದೆ. ಘಟನೆಯಿಂದ ಯಾವುದೇ ಹಾನಿ
ಸಂಭವಿಸಿಲ್ಲ, ಹಗಲು ಮರದ ಗೆಲ್ಲು ಬೀಳುತ್ತಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು..



























