ಈಶ್ವರಮಂಗಲ: ‘ರಕ್ಷಾ ಕ್ಲಿನಿಕ್ ಅಂಡ್ ಲ್ಯಾಬೋರೇಟರಿ 24*7’ ಉದ್ಘಾಟನಾ ಸಮಾರಂಭವು ಜ.19 ರಂದು ಈಶ್ವರಮಂಗಲ ಪೇಟೆಯ ಪೆಟ್ರೋಲ್ ಪಂಪ್ ಬಳಿಯ ಆರ್.ಆರ್.ಪಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯನ್ನು ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಉದ್ಘಾಟಿಸಲಿದ್ದಾರೆ.
ಈಶ್ವರಮಂಗಲ ಟೌನ್ ಖತೀಬರಾದ ಜ. ನಝಿರ್ ಅಝಹರಿ ಬೊಳ್ಮನಾರ್, ಪ್ರಗತಿಪರ ಕೃಷಿಕರಾದ ಕೃಷ್ಣ ಭಟ್ ಮುಂಡ್ಯ, ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದ ಶಿವರಾಮ ಪಿ. ರವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ, ಪುತ್ತೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಉದಯರವಿ ಎಂ.ವೈ, ಕಟ್ಟಡ ಮಾಲಕರಾದ ಬಿ. ವೆಂಕಟ್ರಮಣ ಭಟ್ ರವರು ಆಗಮಿಸಲಿದ್ದಾರೆ.
ಇಸಿಜಿ, ಆಕ್ಸಿಜನ್, ಥೈರಾಯಿಡ್ ಫಂಕ್ಷನ್ ಟೆಸ್ಟ್, ಕಂಪ್ಯೂಟರೈಸಿಡ್ ಲ್ಯಾಬ್,ನೆಬ್ಯುಲೈಸೇಶನ್, ಹೆಮಟಾಲಜಿ, ಸೀರಾಲಜಿ, ಬಯೋಕೆಮಿಸ್ಟ್ರಿ ಪರೀಕ್ಷೆ ಹಾಗೂ ಇನ್ನಿತರ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..





























