ಪೆರಜದಲ್ಲಿ ವಾಸವಾಗಿದ್ದ ಆಧೂರು ಕುಂಡಲ ಸಮೀಪದ ಕಾಸರಗೋಡಿನಲ್ಲಿ ಉಪತಹಶೀಲ್ದಾರ್ ಆಗಿದ್ದ ತಲಕಾವೇರಿ ಗೋಪಾಲಕೃಷ್ಣ ಆಚಾರ್ಯ(82) ರವರು ಜ.17 ರಂದು ನಿಧನರಾದರು.

ಗೋಪಾಲಕೃಷ್ಣ ಆಚಾರ್ಯ ರವರು, ಕೇರಳದ ಕಾಸರಗೋಡಿನಲ್ಲಿ ಡೆಪ್ಯೂಟಿ ತಹಶೀಲ್ದಾರ್ ಆಗಿದ್ದು,1995 ರಲ್ಲಿ ನಿವೃತ್ತಿ ಹೊಂದಿದ್ದರು. ತಲಕಾವೇರಿ ದೇವಸ್ಥಾನದ ಮೂಲ ಅರ್ಚಕರಾಗಿದ್ದರು.
ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಪೆರಜ ನಿವಾಸಿಯಾಗಿರುವ ಇವರು ಪೆರಜ ವನಶಾಸ್ತರ ದೇವಸ್ಥಾನದ ಮಾಜಿ ಅಧ್ಯಕ್ಷರು ಹಾಗೂ ಪೆರಜ ತೂಗು ಸೇತುವೆ ಕ್ರಿಯಾ ಸಮಿತಿಯ ಅಧ್ಯಕ್ಷರೂ ಆಗಿದ್ದು, ಹಲವು ಸಂಘ-ಸಂಸ್ಥೆಗಳಿಗೆ ಕೊಡುಗೈ ದಾನಿಯೂ ಆಗಿದ್ದು, ಜನಾನುಜಾಹೀರಾಗಿದ್ದರು.
ಮೃತರು ಪತ್ನಿ ಪದ್ಮಾವತಿ, ಪುತ್ರ ಟಾಟಾ ಅರವಿಂದ್ ಮೋಟರ್ಸ್ ಪುತ್ತೂರು ಶಾಖೆಯ ಸರ್ವಿಸ್ ಮ್ಯಾನೇಜರ್ ಕೃಷ್ಣ ಪ್ರಸಾದ್ ಆಚಾರ್ಯ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಪುತ್ತೂರು ಬ್ರ್ಯಾಂಚ್ ನ ವ್ಯವಸ್ಥಾಪಕರಾದ ಸವಿತಾ ನಾಗರಾಜ್ ರನ್ನು ಒಳಗೊಂಡು ನಾಲ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ..

























