ಮುಂಡೂರು: ಹತ್ಯೆಯಾದ ದಲಿತ ಯುವತಿಯ ಮನೆಯವರಿಗೆ ಸೂಕ್ತ ಪರಿಹಾರ ಹಾಗೂ ತೀವ್ರ ಬಡತನದಲ್ಲಿರುವ ಅವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಅಭಿಷೇಕ್ ಬೆಳ್ಳಿಪ್ಪಾಡಿ ಆಗ್ರಹಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸಬಾರದು, ಬಿ.ಎಸ್ಸಿ ಪದವೀಧರೆ ಅಮಾಯಕ ವಿದ್ಯಾವಂತ ದಲಿತ ಸಮುದಾಯದ ಹೆಣ್ಣುಮಗಳು ಜೀವ ಕಳೆದುಕೊಂಡ ಘಟನೆ ಅತ್ಯಂತ ದುಃಖದ ವಿಷಯವಾಗಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು., ಘಟನೆಯಿಂದ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

























