ಮಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್ ರಾಜನ ಕುಟುಂಬ ಸದಸ್ಯನ ಸೋಗಿನಲ್ಲಿ ನವದೆಹಲಿಯ ಹೊಟೇಲ್ನಲ್ಲಿ ಉಳಿದುಕೊಂಡು ಲಕ್ಷಾಂತರ ರೂಪಾಯಿ ಬಿಲ್ ಪಾವತಿಸದೆ ವಂಚಿಸಿದ ಆರೋಪದಲ್ಲಿ ನವದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಪುತ್ತೂರಿನ ದರ್ಬೆ ನಿವಾಸಿ ಮೊಹಮ್ಮದ್ ಶರೀಫ್ (41) ಎಂದು ಗುರುತಿಸಲಾಗಿದೆ.
ಈತನನ್ನು ಪೊಲೀಸರು ಜ.19 ರಂದು ಪುತ್ತೂರಿನಿಂದ ಬಂಧಿಸಿ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಪಂಚತಾರಾ ಹೋಟೆಲ್ ಆಗಿರುವ ಲೀಲಾ ಪ್ಯಾಲೇಸ್ ಗೆ ಆ.1ರಂದು ತೆರಳಿದ್ದ ಮೊಹಮ್ಮದ್ ಷರೀಫ್ ತಾನು ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡಿದ್ದ. ಅಧಿಕಾರಿಗಳನ್ನು ನಂಬಿಸಲು ಯುಎಇ ಮೂಲದ ಪೌರತ್ವ ಚೀಟಿ ಹಾಗೂ ನಕಲಿ ಬಿಸಿನೆಸ್ ಕಾರ್ಡ್ ಗಳನ್ನು ನೀಡಿದ್ದ ಎಂದು ಹೇಳಲಾಗಿದೆ. ಸುಮಾರು 4 ತಿಂಗಳುಗಳ ಕಾಲ ತಂಗಿದ್ದಲ್ಲದೆ, 23 ಲಕ್ಷ ರೂ. ಬಿಲ್ ಕಟ್ಟದೆ ಹೋಟೆಲ್ ನ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದವನ್ನು ಪುತ್ತೂರಿನಲ್ಲಿ ಬಂಧಿಸಲಾಗಿದೆ…

























