ವಿಟ್ಲ: ವ್ಯಕ್ತಿಯೋರ್ವರು ಅಡಿಕೆ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ವಿಟ್ಲಮುಡ್ನೂರಿನ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ನಿವಾಸಿ ಹರೀಶ್ (53) ಮೃತ ವ್ಯಕ್ತಿ.

ಹರೀಶ್ ತನ್ನ ತೋಟದಲ್ಲಿ ಕೃಷಿ ಯಂತ್ರದ ಮೂಲಕ ಅಡಿಕೆ ತೆಗೆಯುವಾಗ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತರು ಪತ್ನಿ ಲೀಲಾ, ಪುತ್ರರಾದ ವಿಶ್ವರಾಜ್ ಹಾಗೂ ವಿನೋದ್ ರಾಜ್ ರನ್ನು ಅಗಲಿದ್ದಾರೆ..


























