ಮಣಿಪಾಲ: ಪರ್ಕಳ ಮಾರುಕಟ್ಟೆ ಸಮೀಪ ಕರಾವಳಿಯಲ್ಲಿ ಅಪರೂಪವಾಗಿ ಕಂಡುಬರುವ ಫ್ಲೈಯಿಂಗ್ ಸ್ನೇಕ್ (ಹಾರುವ ಹಾವು) ಪತ್ತೆಯಾಗಿದೆ.
ಮರದಿಂದ ತಟ್ಟನೆ ಹಾರಿದ ಹಾವು ಎಲ್ಲರ ಗಮನ ಸೆಳೆದಿದೆ.

ಕಪ್ಪು, ಕೆಂಪು, ಬಿಳಿ ಬಣ್ಣದಿಂದ ಕೂಡಿದ ಈ ಹಾವು ಕಂಡು ಸ್ಥಳೀಯರು ಭಯಭೀತರಾಗಿದ್ದರು. ಉರಗ ತಜ್ಞ ಗುರುರಾಜ್ ಸನಿಲ್ ಅವರು ಹಾವಿನ ಬಗ್ಗೆ ಮಾಹಿತಿ ನೀಡಿ ಇದು ಪಶ್ಚಿಮಘಟ್ಟ ಮಲೆನಾಡು ಭಾಗದಲ್ಲಿ ಹೆಚ್ಚು ಕಂಡುಬರುತ್ತದೆ. ಕರಾವಳಿಯಲ್ಲಿ ತೀರ ಅಪರೂಪವಾಗಿದೆ. ಇದರ ರೂಪ ಕಂಡು ಕೆಲವರು ಭಯದಿಂದ ಇದನ್ನು ಸಾಯಿಸಿದ ಘಟನೆಗಳು ನಡೆದಿದೆ. ಇದು ವಿಷ ರಹಿತ ಹಾವು. ಮರದಲ್ಲೆ ಹುಟ್ಟಿ, ಮರದಲ್ಲೆ ಜೀವಿಸಿ, ಮರದಲ್ಲಿರುವ ಕ್ರಿಮಿ, ಕೀಟ, ಪಕ್ಷಿಗಳ ಮೊಟ್ಟೆಗಳನ್ನು ತಿಂದು ಈ ಹಾವು ಜೀವಿಸುತ್ತದೆ. ಇದಕ್ಕೆ ತುಳು ಭಾಷೆಯಲ್ಲಿ ಪುಲ್ಲಿ ಪುತ್ರ ಎಂದು ಕರೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


























