ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಬೋಧನ ಸಂಯೋಜಕ ಸಾಮೆತ್ತಡ್ಕ ನಿವಾಸಿ ಬಡೆಕ್ಕಿಲ ಶಂಕರ್ ಭಟ್ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶಂಕರ್ ಭಟ್ ಅವರು ಬೆಂಗಳೂರಿನ ಮಗಳ ಮನೆಗೆ ತೆರಳಿದ್ದು, ಅಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂದು ತಿಳಿದು ಬಂದಿದೆ.

ಶಂಕರ್ ಭಟ್ ಅವರು ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ನಿವೃತ್ತ ಜೀವನದ ಬಳಿಕ ತನ್ನ ಸಂಘ ಕಾರ್ಯದಲ್ಲಿ ಪೂರ್ಣಾವಧಿಯಾಗಿದ್ದರು.
ಸಂಘದ ಪುತ್ತೂರು ಜಿಲ್ಲೆಯ ವಿವಿಧೆಡೆ ಘೋಷ್ ಅಧ್ಯಯನಕ್ಕೆ ಒತ್ತುಕೊಟ್ಟು, ಹಲವಾರು ಸ್ವಯಂಸೇವಕರನ್ನು ಬೆಳೆಸಿದವರು. ಜೊತೆಗೆ ಜಿಲ್ಲೆಯ ವ್ಯವಸ್ಥಾ ಪ್ರಮುಖರಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ..

























