ಕರ್ನಾಟಕ ಸರ್ಕಾರವೂ 60 ವರ್ಷ ದಾಟಿದ ದೈವನರ್ತಕರಿಗೆ ಮಾಸಿಕ ಗೌರವಧನ ನೀಡುವ ಯೋಜನೆಯನ್ನು ಪ್ರಕಟಿಸಿತು. ಯೋಜನೆ ಪ್ರಕಟವಾಗಿ 2 ತಿಂಗಳಾದರೂ ಈವರೆಗೆ ಮಾರ್ಗದರ್ಶಿ ಸೂತ್ರಗಳು ಪ್ರಕಟವಾಗಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ‘ಫಲಾನುಭವಿಗಳ ಮಾಹಿತಿ ಸಂಗ್ರಹದಲ್ಲಿ ತೊಡಕುಂಟಾಗಿದೆ. ಸರಿಯಾಗಿ ಮಾಹಿತಿ ಸಿಗುತ್ತಿಲ್ಲ’ ಎಂದು ಹೇಳಿದ್ದಾರೆ.
ಸದ್ಯ ದೈವ ನರ್ತಕರನ್ನು ಜಾನಪದ ಕಲಾವಿದರ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ದೈವ ನರ್ತಕ ಬಗ್ಗೆಯೇ ಪ್ರತ್ಯೇಕ ಸಮೀಕ್ಷೆ ನಡೆದಿಲ್ಲ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರ್ಕಾರ ಸರಳಗೊಳಿಸಬೇಕಾಗಿರುವ ಅನಿವಾರ್ಯತೆಯೂ ಇದೆ. ಹೀಗಾಗಿ ಇಲ್ಲಿಯವರೆಗೆ ದಕ್ಷಿಣ ಕನ್ನಡದ ಇಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಲವು ಕಲಾವಿದರು ಈಗಾಗಲೇ ವೃದ್ಧಾಪ್ಯ ಪಿಂಚಣಿ (ಸಂಧ್ಯಾ ಸುರಕ್ಷಾ ₹1,000) ಪಡೆಯುತ್ತಿದ್ದಾರೆ. ಅವರು ಈ ಹೊಸ ಗೌರವಧನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಒಂದು ವೇಳೆ ಹೊಸದಾಗಿ ಪಿಂಚಣಿಗೆ ಅರ್ಜಿ ಹಾಕಬೇಕೆಂದರೆ ಹಿಂದಿನ ಪಿಂಚಣಿಯಿಂದ ಹೊರಬರಬೇಕೆಂಬ ನಿಯಮವಿದೆ. ವೃದ್ಧಾಪ್ಯ ಪಿಂಚಣಿ ರದ್ದುಪಡಿಸಿ, ಹೊಸ ಪಿಂಚಣಿಗೆ ಅರ್ಜಿ ಸಲ್ಲಿಸುವ ವಿಧಾನ ಸರಳವಾಗಿಲ್ಲ.

























