ಹಿಂದೂ ಸೇವಾ ಬ್ರಿಗೇಡ್ ವಿಟ್ಲ ತಾಲೂಕು ವತಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಡ ಕುಟುಂಬದ 3 ಮಕ್ಕಳ ಚಿಕಿತ್ಸಾ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಸಹಾಯಧನ ಹಸ್ತಾಂತರ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

ಸಂಗ್ರಹವಾದ 1,20,000 ರೂ. ಹಣವನ್ನು ಮಕ್ಕಳ ಪೋಷಕರು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಅಕ್ಷಯ್ ರಜಪೂತ್ ಹಾಗೂ ಹಿಂದೂ ಸೇವಾ ಬ್ರಿಗೇಡ್ ನ ಸದಸ್ಯರು ಮತ್ತು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.




























