ವಿಟ್ಲ : ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ, ವಿಟ್ಲ ಮಹಾಶಕ್ತಿ ಕೇಂದ್ರ ಇದರ ವತಿಯಿಂದ ಕಮಲ ಕುಟುಂಬ ಮಿಲನ ಮತ್ತು ಕಮಲ ಕ್ರೀಡೋತ್ಸವವು ವಿಟ್ಠಲ ಪದವಿ ಪೂರ್ವ ಕಾಲೇಜಿನ ಕ್ರಿಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಿಟ್ಠಲ ಪ್ರೌಢ ಶಾಲೆಯ ಮಾಜಿ ಉಪಪ್ರಾಂಶುಪಾಲ ಹೆಚ್ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು.
ಬಿಜೆಪಿ ಹಿರಿಯ ಕಾರ್ಯಕರ್ತ ನಿತ್ಯಾನಂದ ನಾಯಕ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಅರುಣ್ ವಿಟ್ಲ, ಕರುಣಾಕರ ನಾಯ್ತೊಟ್ಟು, ರವೀಶ್ ವಿಟ್ಲ, ವೀರಪ್ಪ ಗೌಡ ರಾಯರಬೆಟ್ಟು, ಹರೀಶ್ ಸಿ ಹೆಚ್,ಲೋಕನಾಥ ಶೆಟ್ಟಿ ಕೊಲ್ಯ, ಚಂದ್ರಕಾಂತಿ ಶೆಟ್ಟಿ, ರಾಮದಾಸ್ ಶೆಣೈ, ಮೋಹನದಾಸ್ ಉಕ್ಕುಡ, ಜಗದೀಶ್ ಪಾಣೆಮಜಲು, ಸುದರ್ಶನ್, ರಾಕೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.


























