ಪುತ್ತೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಮಳಿಗೆ ಮುಂದೆ ರಂಪಾಟ ಮಾಡಿದ ಘಟನೆ ಪುತ್ತೂರು ಗಾಂಧಿ ಕಟ್ಟೆಯ ಬಳಿಯ ಅಶ್ವಿನಿ ಮೆಡಿಕಲ್ ಬಳಿ ನಡೆದಿದೆ.

ಗಾಂಧಿ ಕಟ್ಟೆಯ ಬಳಿಯ ಅಶ್ವಿನಿ ಮೆಡಿಕಲ್ ಗೆ ಆಗಮಿಸಿದ ವ್ಯಕ್ತಿಯೋರ್ವ ಚಿಲ್ಲರೆ ವಿಚಾರಕ್ಕೆ ರಂಪಾಟ ಮಾಡಿದ್ದು, ಈತನ ರಂಪಾಟವನ್ನು ನೋಡಿ ಸಾರ್ವಜನಿಕರು ಸ್ಥಳದಲ್ಲಿ ಜಮಾವಣೆಗೊಂಡಿದ್ದು, ಕೆಲ ಕಾಲ ರಸ್ತೆ ಸಂಚಾರ ಕೂಡ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಜನರನ್ನು ಸ್ಥಳದಿಂದ ತೆರಳಿಸಿದರು ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಮೆಡಿಕಲ್ ಶಾಪ್ ಗೆ ಆಗಮಿಸಿದ್ದ ವ್ಯಕ್ತಿ 100 ರೂ. ನೋಟು ನೀಡಿ ಚಿಲ್ಲರೆ ಕೊಡುವಂತೆ ಕೇಳಿದ್ದು, ಆ ಮೆಡಿಕಲ್ ನವರು ನೋಟ್ ಇಲ್ಲ ಚಿಲ್ಲರೆ ಬೇಕಾದರೆ ನೀಡುತ್ತೇವೆ ಆಗಬಹುದು ಎಂದು ಕೇಳಿದ್ದಕ್ಕೆ ಆತ ಆಗಬಹುದು ಎಂದು ಹೇಳಿ ಕೊಂಡೊಯ್ಯಿದಿದ್ದು, ನಂತರ ಸಂಜೆ ಬಂದು 10 ರೂ. 6 ಕಾಯಿನ್ ಬೇರೆ ನೀಡಿ 4 ಕಾಯಿನ್ ಹೋಗುವುದಿಲ್ಲ ನೀವು ನನಗೆ ಮೋಸ ಮಾಡಿದ್ದೀರಿ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ರಂಪಾಟ ಮಾಡಿದ್ದಾಗಿ ತಿಳಿದು ಬಂದಿದೆ..
























