ಪುತ್ತೂರು : ಮೊಗರ್ನಾಡು ಶ್ರೀ ರಾಜಗೋಪಾಲ ಆಚಾರ್ಯರ ನೇತೃತ್ವದಲ್ಲಿ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ದೈವಸ್ಠಾನ ಪಡ್ನೂರು ಗುರುಂಪುನಾರು ಇಲ್ಲಿ ಏ.30 ರಿಂದ ಮೇ.1 ರವರೆಗೆ ನಡೆಯಬೇಕಿದ್ದ ಸ್ವಾಮಿ ಕೊರಗಜ್ಜ ಶಿಲಾಮಯ ವಿಗ್ರಹ ಪ್ರತಿಷ್ಠಾಪನೆ ಮತ್ತು ಧರ್ಮ ದೈವದ ದೈವಸ್ಥಾನ ಪುನರ್ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವವು ಸರಕಾರದ ಕೋವಿಡ್ ಮುನ್ನೆಚ್ಚರಿಕೆ ಆದೇಶದನ್ವಯ ಮುಂದೂಡಲಾಗಿದೆ ಎಂದು ಸ್ವಾಮಿ ಕೊರಗಜ್ಜ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.