ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ 4ನೇ ವಾರ್ಡ್ ನ ಚಂದಳಿಕೆ ಕುರುoಬಳ ಸಂಪರ್ಕ ರಸ್ತೆಗೆ ಶಾಸಕರ ಮಳೆ ಹಾನಿ ಅನುದಾನದಿಂದ ಸುಮಾರು 4 ಲಕ್ಷದ ಮರುಡಾಮಾರಿಕರಣ ರಸ್ತೆ ಅಭಿವೃದ್ಧಿಯ ಗುದ್ದಲಿ ಪೂಜೆ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅರುಣ್ ವಿಟ್ಲ, ವಾರ್ಡ್ ನ ಸದಸ್ಯರಾದ ರಕ್ಷಿತಾ ಸನತ್ ಚಂದಳಿಕೆ ಮತ್ತು ಪಕ್ಷದ ಪ್ರಮುಖರಾದ ದಯಾನಂದ ಶೆಟ್ಟಿ ಉಜಿರೆಮಾರ್, ನರ್ಸಪ್ಪ ಪೂಜಾರಿ ನಿಡ್ಯ, ತಿರುಮಲೇಶ್ವರ ಗೌಡ ನಿಡ್ಯ, ಸದಾನಂದ ಡೆಪ್ಪಿನಿ, ನಾಗೇಶ್ ಬಸವನಗುಡಿ,ಸುಶಾಂತ್ ಚಂದಳಿಕೆ, ಪದ್ಮನಾಭ ಶೆಟ್ಟಿ ಚಪುಡಿಯಡ್ಕ, ವನಿತ್ ಡೆಪ್ಪಿನಿ, ಪುನೀತ್ ಕುರುoಬಳ,ಸುಜಿತ್, ಚಿದಾನಂದ ಶೆಟ್ಟಿ ಉಜಿರೆಮಾರು ಮತ್ತಿತರರು ಉಪಸ್ಥಿತರಿದ್ದರು.
ಗುದ್ದಲಿ ಪೂಜೆಯನ್ನು ಊರಿನ ಹಿರಿಯರಾದ ಬಾಬು ಆಚಾರ್ಯ ನಿಡ್ಯ ಮತ್ತು ಭಾರತ್ ಗ್ರೂಪ್ಸ್ ನ ಇದರ ಮಾಲಕರಾದ ಸಂಜೀವ ಪೂಜಾರಿ ನೆರೆವೇರಿಸಿದರು.