ಪುತ್ತೂರು: ಬನ್ನೂರಿನ ನೆಕ್ಕಿಲದಲ್ಲಿ ತಂಡದಿಂದ ಹಲ್ಲೆ ನಡೆಸಿರುವುದಾಗಿ ಎರಡು ಕಡೆಯವರು ಆರೋಪ ಮತ್ತು ಪ್ರತ್ಯಾರೋಪ ಮಾಡಿ ಪುತ್ತೂರು ನಗರ ಪೊಲೀಸ್
ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಆರೋಪ-ಪ್ರತ್ಯಾರೋಪ :
ಬನ್ನೂರು ಗ್ರಾಮದ ನೆಕ್ಕಿಲ ನಿವಾಸಿ ವಿಜೇತ್ ಗೌಡ ಎಂಬವರು ಹಲ್ಲೆಗೊಳಗಾಗಿದ್ದು, ಅವರಿಗೆ ಸ್ಥಳೀಯರಾದ ಪ್ರತಾಪ್ ಮತ್ತು ಆತನ ತಂಡದ ಅಭಿಜಿತ್ ಮತ್ತು ಮತ್ತಿಬ್ಬರು ಮನೆಗೆ ಬಂದು ಹಲ್ಲೆ ನಡೆಸಿದ್ದು, ವಿಜೇತ್ ರವರ ತಾಯಿ ಹಲ್ಲೆಯನ್ನು ತಪ್ಪಿಸಲು ಹೋದಾಗ ಅವರನ್ನು ಆರೋಪಿಗಳು ದೂಡಿ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ವಿಜೇತ್ ಗೌಡ ರವರ ಮನೆಗೆ ಆಗಮಿಸಿದ ಕಿರಣ್ ಡಿಸೋಜ, ನಿಶಾ, ರವಿಚಂದ್ರ ಹಾಗೂ ರಂಜಿತ್ ರವರಿಗೂ ಆರೋಪಿಗಳು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದಲ್ಲದೆ, ಸ್ಥಳಕ್ಕೆ ಇನ್ನಷ್ಟು ಜನರು ಬರುವುದನ್ನು ಕಂಡು ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ವಿಜೇತ್ ಗೌಡ ಮತ್ತು ಮತ್ತಿಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಸೆಕ್ಷನ್ ಕಲಂ: 143, 147, 148, 448, 504, 323, 324, 307, 354, 506 ಜೊತೆಗೆ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನೂರು ನೆಕ್ಕಿಲ ನಿವಾಸಿ ಪ್ರತಾಪ್ ಎಂಬವರ ಪತ್ನಿ ವೈಶಾಲಿ ಎಂಬವರು ನೀಡಿದ ದೂರಿನಂತೆ ನನ್ನ ಗಂಡ ಪ್ರತಾಪ್ ರವರಿಗೆ ರಂಜಿತ್, ವಿಜೀತ್, ರವಿ, ಕಿರಣ್ ಮತ್ತು ವಿಜಯ್ ಎಂಬವರುಗಳು ಚಾಕುವಿನಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
ಈ ಬಗ್ಗೆ ಠಾಣೆಯಲ್ಲಿ ಸೆಕ್ಷನ್ ಕಲಂ: 143,147, 148, 323, 324, 504, 506 ಜೊತೆಗೆ 149 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ..