ಮಡಿಕೇರಿ : ಮಡಿಕೇರಿ – ಮಂಗಳೂರು ರಸ್ತೆಯ ಎರಡನೆಯ ಮೊಣ್ಣoಗೇರಿ ಬಳಿ ನಿನ್ನೆ ಸಂಜೆ ರಸ್ತೆ ಕುಸಿತ ಉಂಟಾಗಿದ್ದು ಅಲ್ಪಮಟ್ಟಿಗೆ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸ್ಥಳೀಯ ಆಡಳಿತ ಕೂಡಲೇ ಸ್ಪಂದಿಸಿ ತೆರವು ಕಾರ್ಯ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ.
ಕಳೆದ 2 ವರ್ಷಗಳ ಹಿಂದೆ ಉಂಟಾದ ಭೂಕುಸಿತದಲ್ಲಿ ಈ ಭಾಗದ ರಸ್ತೆಯ ಕಾಮಗಾರಿಯು ನಡೆಯುತ್ತಿದ್ದು, ಇದೀಗ ಮತ್ತೊಮ್ಮೆ ತಳ ಭಾಗದಿಂದಲೇ ಮಣ್ಣು ಕುಸಿಯುತ್ತಿರುವುದನ್ನು ಕಂಡ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.