ವಿಟ್ಲ: ಆಕ್ಟಿವಾಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಪೆರ್ನಾಜೆಯಲ್ಲಿ ನಡೆದಿದೆ.
ಪೆರ್ನಾಜೆ ಕಂಟ್ರಮಜಲಿನ ದಂಪತಿಗಳಿಬ್ಬರು ಆಕ್ಟಿವಾದಲ್ಲಿ ಸುಳ್ಯ ಕಡೆಯಿಂದ ಬರುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಬರುತ್ತಿದ್ದ ಬೆಂಜ್ಸ್ ಕಾರು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆನ್ನಲಾಗಿದೆ.
ಘಟನೆಯಲ್ಲಿ ಪೆರ್ನಾಜೆ ಕಂಟ್ರಮಜಲು ನಿವಾಸಿ ಗಂಗಾಧರ ಗೌಡ ಮತ್ತು ಅವರ ಪತ್ನಿ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.