ಪುತ್ತೂರು: ತಾಲೂಕಿನ ಆರ್ಯಾಪು ಗ್ರಾ.ಪಂ.ನ ಆರ್ಯಾಪು ವಾರ್ಡ್ 4ರ ಸದಸ್ಯರೋರ್ವನ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ರವರು 171 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ಆರ್ಯಾಪು ವಾರ್ಡ್ 4ರ ಸದಸ್ಯ ಗಿರೀಶ್ ಮರಿಕೆಯವರ ಮರಣದಿಂದ ತೆರವಾದ ಸ್ಥಾನಕ್ಕೆ ಫೆ.25 ರಂದು ಮತದಾನ ಪ್ರಕ್ರಿಯೆಗಳು ನಡೆದಿದೆ. ಮತ ಎಣಿಕೆ ಕಾರ್ಯಗಳು ಫೆ.28 ರಂದು ತಾಲೂಕು ಆಡಳಿತ ಸೌಧದಲ್ಲಿ ನೆರವೇರಿದೆ.

ವಾರ್ಡ್ 4ರ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ರವರು 498 ಮತಗಳನ್ನು ಪಡೆದು, 327 ಮತಗಳನ್ನು ಪಡೆದ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೈ ತೊಟ್ಲ ರವರ ವಿರುದ್ಧ 171 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 11 ಮತಗಳು ತಿರಸ್ಕೃತಗೊಂಡಿದೆ..

























