ವಿಟ್ಲ: ಕಳವಾದ ಮೊಬೈಲ್ ನ್ನು ಪತ್ತೆ ಹಚ್ಚಲು ನೂತನವಾಗಿ ಅನುಷ್ಠಾನಗೊಂಡಿರುವ CEIR Portal ಸಹಾಯದಿಂದ ವಿಟ್ಲ ಪೊಲೀಸರು ಪತ್ತೆ ಹಚ್ಚಿ ಕಳವಾದ ಮೊಬೈಲ್ ನ್ನು ವಾರಿಸುದಾರರಿಗೆ ಹಿಂದಿರುಗಿಸಿದ್ದಾರೆ.

ಕಳವಾದ/ಕಳೆದುಹೋದ/ಸುಲಿಗೆಯಾದ ಮೊಬೈಲ್ ಫೋನ್ ಗಳ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನೂತನವಾಗಿ ಅನುಷ್ಠಾನಗೊಂಡಿರುವ CEIR Portal ಸಹಾಯದಿಂದ ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಮೊಬೈಲ್ ಫೋನ್ನ್ನು ಫೆ.27 ರಂದು ಪತ್ತೆಹಚ್ಚಿ ವಾರಿಸುದಾರರಿಗೆ ಹಿಂತಿರುಗಿಸಲಾಯಿತು.
ಇಲ್ಲಿಯವರೆಗೆ 2 ಮೊಬೈಲ್ ಫೋನ್ ಪತ್ತೆ ಮಾಡಿ ವಾರಿಸುದಾರರಿಗೆ ಹಿಂತಿರುಗಿಸಲಾಗಿದೆ.


























