ಪುತ್ತೂರು: ಅರ್ಜುನ್ ಸ್ಪೋರ್ಟ್ಸ್ ಕ್ಲಬ್ ಮಂಜಲ್ಪಡ್ಪು ಪುತ್ತೂರು ಮತ್ತು ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ದಕ್ಷಿಣ ಕನ್ನಡ ಇದರ ಸಹಯೋಗದೊಂದಿಗೆ ಪುತ್ತೂರಿನ ಮಾಜಿ ಶಾಸಕರಾದ ಶಕುಂತಲಾ ಟಿ. ಶೆಟ್ಟಿ ಯವರ ಜನ್ಮದಿನಾಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಗಾರ ಹಾಗೂ ರಕ್ತದಾನ ಶಿಬಿರ ಮಾ.5 ರಂದು ಬೆಳಿಗ್ಗೆ 9 ರಿಂದ ಸಂಜೆ 3ರ ವರೆಗೆ ಸುದಾನ ವಸತಿಯುತ ಶಾಲೆ ಮಂಜಲ್ಪಡ್ಪು ನಲ್ಲಿ ನಡೆಯಲಿದೆ.
ಉಚಿತ ವೈದ್ಯಕೀಯ ತಪಾಸಣಾ ಮತ್ತು ಸಲಹಾ ಶಿಬಿರದಲ್ಲಿ ಜನರಲ್ ಮೆಡಿಸಿನ್ ವಿಭಾಗ, ಮಕ್ಕಳ ರೋಗ ವಿಭಾಗ, ನೇತ್ರ ಚಿಕಿತ್ಸಾ ಶಿಬಿರ ಹಾಗೂ ಚರ್ಮ ಮತ್ತು ಲೈಂಗಿಕ ರೋಗ ವಿಭಾಗ, ಸ್ತ್ರೀ ರೋಗ ಹಾಗೂ ಇನ್ನಿತರ ವಿಭಾಗಳಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..