ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಒದಗಿಸಿದ ಹನ್ನೊಂದನೇ ಹಣಕಾಸು ಯೋಜನೆಯಡಿಯಲ್ಲಿ ನೀರಕಣಿ ಸೆರಂತಿಮಠ ರಸ್ತೆಗೆ ಕಾಂಕ್ರೀಟೀಕರಣಕ್ಕೆ ಹತ್ತು ಲಕ್ಷ ರೂ. ಒದಗಿಸಿದ್ದು, ಈ ಕಾಮಗಾರಿಗೆ ಮುಖಂಡರಾದ ಅಭಿಷೇಕ್ ಶಂಕುಸ್ಥಾಪನೆ ನೆರವೇರಿಸಿದರು.

ಪಟ್ಟಣ ಪಂಚಾಯತ್ ಸದಸ್ಯರುಗಳಾದ ಅರುಣ್ ವಿಟ್ಲ ಮತ್ತು ಹರೀಶ್ ಸಿ ಹೆಚ್, ನಾಗೇಶ್ ಬಸವನಗುಡಿ, ಸುದರ್ಶನ್, ಕುಂಞ ಬ್ಯಾರಿ, ಕುಂಞಣ್ಣ, ಶಿವಾ ಮತ್ತಿತರರು ಉಪಸ್ಥಿತರಿದ್ದರು..