ವಿಟ್ಲ: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿದ್ದ ಬಿ. ಬಾಲಕೃಷ್ಣ (58) ರವರು ಅನಾರೋಗ್ಯದಿಂದ ನಿಧನರಾದರು.

ಬಾಲಕೃಷ್ಣ ರವರು ಕಳೆದ ಹಲವು ಸಮಯಗಳಿಂದ ವಿಟ್ಲದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅನಾರೋಗ್ಯ ಕಾರಣಕ್ಕಾಗಿ ರಜೆ ಹಾಕಿದ್ದು, ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದು ಬಂದಿದೆ..