ಪುತ್ತೂರು: ನಗರ ಕಾಂಗ್ರೆಸ್ ವ್ಯಾಪ್ತಿಯ ಜಿಡೆಕಲ್ಲು ಬೂತ್ ವ್ಯಾಪ್ತಿಯ ನೆಕ್ಕರೆ -ರಾಗಿದ ಕುಮೇರು ಪ್ರದೇಶದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಸಿರಿಲ್ ರೋಡ್ರಿಗಸ್ ರವರ ನೇತೃತ್ವದಲ್ಲಿ ಮನೆ ಮನೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂಪಾಯಿ ಸಹಾಯಧನ, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಹಾಗೂ ಪ್ರತಿ ಬಿ ಪಿ ಎಲ್ ಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆಯ ಬಗ್ಗೆ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಿಸಿದರು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಕಾರ್ಯದರ್ಶಿಗಳಾದ ಕೃಷ್ಣಪ್ಪ ಪೂಜಾರಿ ನೆಕ್ಕರೆ ಬೆದ್ರಾಳ, ಮೌರಿಸ್ ಕುತಿನ್ಹ ರಾಗಿದಕುಮೇರು, ದಿನೇಶ್ ಬೆದ್ರಾಳ, ಮುಂಡಪ್ಪ ನೆಕ್ಕರೆ, ಫ್ರಾನ್ಸಿಸ್ ಸೆರಾವೋ, ಮಂಜು ಮೊದಲಾದವರು ಉಪಸ್ಥಿತರಿದ್ದರು.