ಬಂಟ್ವಾಳ: ಮಾಣಿ ನಿವಾಸಿ ಬಾಲಕನೋರ್ವ ಪೆರ್ನೆ ನೇತ್ರಾವತಿ ಬಿಳಿಯೂರು ಬಳಿ ನೀರುಪಾಲಾದ ಘಟನೆ ನಡೆದಿದೆ.
ಮೃತ ಬಾಲಕನನ್ನು ತ್ವಾಹಿರ್ ಅವರ ಪುತ್ರ ಸಲ್ಮಾನ್(16) ಎಂದು ಗುರುತಿಸಲಾಗಿದೆ.

ಸಲ್ಮಾನ್ ಮನೆಯಿಂದ ಟ್ಯೂಷನ್ ಗೆ ತೆರಳಿದ್ದು, ಅಲ್ಲಿಂದ ಗೆಳೆಯನ ಜೊತೆ ಪೆರ್ನೆ ನದಿಗೆ ತೆರಳಿದ್ದು, ನದಿಗಿಳಿದಾಗ ಸಲ್ಮಾನ್ ನೀರುಪಾಲಾಗಿದ್ದಾನೆ ಎನ್ನಲಾಗಿದೆ.
ಬಳಿಕ ಸ್ಥಳೀಯರು ಬಾಲಕನ ಮೃತದೇಹವನ್ನು ಮೇಲಕ್ಕೆತ್ತಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನೋರ್ವ ಬಾಲಕನನ್ನು ರಕ್ಷಣೆ ಮಾಡಲಾಗಿದೆ.
ಮಾಣಿ ನಿವಾಸಿಯಾಗಿರುವ ಸಲ್ಮಾನ್ ನ ತಂದೆ ಇತ್ತೀಚೆಗೆ ಮೃತಪಟ್ಟಿದ್ದು, ಇದೀಗ ಸಲ್ಮಾನ್ ನಿಧನದಿಂದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ..