ಉಪ್ಪಿನಂಗಡಿ : ‘Sam Fitness’ ಜಿಮ್ ಮಾ.22 ರಂದು ಉಪ್ಪಿನಂಗಡಿಯ ಸೌರಭ ಕಾಂಪ್ಲೆಕ್ಸ್ ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯನ್ನು ಉಪ್ಪಿನಂಗಡಿ ಶಾಂತ ದುರ್ಗಾ ಕಲ್ಯಾಣ ಮಂಟಪದ ದಿವ್ಯಾ ಜಿ.ಶೆಣೈ ಹಾಗೂ ಎನ್.ಗಣೇಶ್ ಶೆಣೈ ರವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಶೆಣೈ ಆಸ್ಪತ್ರೆಯ ಡಾ. ಎಂ.ಆರ್. ಶೆಣೈ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿನಾಯಕ್ ಪೈ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಯು.ಟಿ. ತೌಸೀಫ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಕೆ. ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡಿಗ್ರಸ್, ಮಾಜಿ ಸಬ್ ಮೇಜರ್ ನಾರಾಯಣ ಹೆಗ್ಡೆ, ಮಾಜಿ ಯೋಧ ಎನ್. ವಿಶ್ವನಾಥ್ ಶೆಣೈ, ಮಿಸ್ಟರ್ ದಕ್ಷಿಣ ಕನ್ನಡ ಚಾಂಪಿಯನ್ 2019, ಮಿಸ್ಟರ್ ಏಷ್ಯಾ ಸಿಲ್ವರ್ ಮೆಡಲ್ 2019, ಡಬ್ಲ್ಯು ಎಫ್ಎಫ್ ಮೆಂಬರ್/ಜಡ್ಜ್ ಸಚಿನ್ ರೈ ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























