ಸ್ಯಾಂಡಲ್ವುಡ್ ಸಿನಿ ತಾರೆಯರು ಸದಾ ಕೊಡುಗೈ ದಾನಿಗಳು. ಕಷ್ಟಕಾಲದಲ್ಲಿರುವವರನ್ನು ದಡ ಸೇರಿಸುವವರು. ಇದಕ್ಕೆ ಪುನೀತ್ ರಾಜ್ಕುಮಾರ್ ಮೊದಲ ಉದಾಹರಣೆ. ಇದೀಗ ನಟ ಯಶ್ ಕೂಡ ತಮಿಳುನಾಡು ನಟನಿಗೆ ಸಹಾಯ ಮಾಡಿದ್ದಾರೆ.
ಕಾಲಿವುಡ್ ನಟ ಡೇನಿಯಲ್ ಬಾಲಾಜಿ ತಮಿಳುನಾಡಿನಲ್ಲಿ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದು, ಈ ದೇವಾಲಯ ನಿರ್ಮಾಣಕ್ಕೆ ರಾಕಿಂಗ್ ಸ್ಟಾರ್ ಹಣದ ಸಹಾಯ ಮಾಡಿದ್ದಾರೆ. ಅಂದಹಾಗೆಯೇ, ಈ ವಿಚಾರವನ್ನ ಖುದ್ದು ಡೇನಿಯಲ್ ಬಾಲಾಜಿ ಅವರೇ ಇತ್ತೀಚಿನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಇಂಟರ್ವ್ಯೂನಲ್ಲಿ ಮನ ಬಿಚ್ಚಿ ಮಾತನಾಡಿದ್ದ ಡೇನಿಯಲ್ ಬಾಲಾಜಿ, ಕೆಲವು ವರ್ಷಗಳ ಹಿಂದೆ ಯಶ್ ಫೋನ್ ಮಾಡಿ ನನ್ನದೊಂದು ಸಿನಿಮಾ ಮಾಡಿ ಅಂತ ಕೇಳಿದ್ರು. ನಾನು ದೇವಸ್ಥಾನ ಕಟ್ಟುತ್ತಿದ್ದ ಕಾರಣ ಸದ್ಯಕ್ಕೆ ಆಗಲ್ಲ, ನನಗೆ ಸ್ವಲ್ಪ ಕೆಲಸ ಇದೆ ಅಂತ ಹೇಳಿದ್ದೆ. ನಾನು ದೇವಸ್ಥಾನ ಕಟ್ಟುತ್ತಿರುವ ವಿಚಾರ ತಿಳಿದ ಯಶ್ ಸರಿ ನಿಮಗೆ ಒಳ್ಳೆಯದಾಗಲಿ, ಕೆಲಸ ಮುಗಿಸಿ ಆಮೇಲೆ ಸಿನಿಮಾ ಮಾಡೋಣ ಅಂತ ಫೋನ್ ಇಟ್ರು.
ಬಳಿಕ ಫೋನ್ ಕಟ್ ಮಾಡಿದ ನಂತರ ನನಗೆ ಬ್ಯಾಂಕ್ನಿಂದ ಹಣ ಕ್ರೆಡಿಟ್ ಆಗಿರೋ ಮೆಸೇಜ್ ಬಂತು. ಥಟ್ ಅಂತ ಯಶ್ಗೆ ಫೋನ್ ಮಾಡಿದೆ. ಸರ್ ನಾನಿನ್ನು ಸಿನಿಮಾ ಮಾಡ್ತೀನಿ ಅಂತ ನಿಮಗೆ ಹೇಳೇ ಇಲ್ಲ, ಪ್ರೊಡಕ್ಷನ್ ಹೌಸ್ ಜೊತೆ ಮಾತಾಡೇ ಇಲ್ಲ. ನೀವು ಅಷ್ಟು ಬೇಗ ಅಮೌಂಟ್ ಕಳುಹಿಸಿದ್ರಿ ಅಂತ ಕೇಳಿದೆ. ಅದ್ದಕ್ಕೆ ಅವರು, ಅರೇ ಇದು ಸಿನಿಮಾದ ಸಂಭಾವನೆ ಅಲ್ಲ, ನಿಮ್ಮ ದೇವಸ್ಥಾನಕ್ಕೆ ನನ್ನ ಕೊಡುಗೆ. ಸಿನಿಮಾ ಮಾತುಕತೆ ಆಮೇಲೆ ಮಾಡೋಣ ಬಿಡು ಅಂದಿದ್ರು ಅಂತ ಹೇಳ್ಕೊಂಡಿದ್ದಾರೆ.
ಸದ್ಯ ಯಶ್ ಅವರ ಬಗ್ಗೆ ಮಾತನಾಡಿದ ಡೇನಿಯಲ್ ಬಾಲಾಜಿ ಕುರಿತು ಸಿನಿ ಪ್ರೇಮಿಗಳಿಗೆ ಸಂತಸವಾಗಿದೆ. ಅನೇಕರು ಡೇನಿಯಲ್ ಬಾಲಾಜಿ ಅವರ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.


























