ಪುತ್ತೂರು : ದರ್ಬೆ ಕಲ್ಲಗುಡ್ಡೆ ಸಮೃದ್ಧಿ ದೀಪಿಕಾ ಚಂದ್ರಶೇಖರ ಕೆ ಮತ್ತು ಮಕ್ಕಳು ಹಾಗೂ ಊರ ಸಮಸ್ತರ ಆಶ್ರಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 5ನೇ ವರ್ಷದ ‘ಶ್ರೀ ದೇವಿ ಮಹಾತ್ಮೆ’ ಎಂಬ ಪೌರಾಣಿಕ ಪುಣ್ಯ ಕಥಾ ಭಾಗದ ಯಕ್ಷಗಾನ ಬಯಲಾಟ ಇಂದು (ಮಾ.22) ಸಂಜೆ 5.30 ರಿಂದ ನಡೆಯಲಿದೆ.
ಕಲ್ಲಗುಡ್ಡೆಯಲ್ಲಿ ವಿದ್ಯುದ್ಧೀಪಾಲಂಕೃತವಾದ ಭವ್ಯ ರಂಗ ಮಂಟಪದಲ್ಲಿ ಯಕ್ಷಗಾನ ಬಯಲಾಟ ಸೇವೆ ಜರುಗಲಿದೆ.
ರಾತ್ರಿ 7 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ..


























