ಪುತ್ತೂರು: ಚರ್ಚಿನ ಅಧೀನದಲ್ಲಿರುವ ್ಏಳ್ಮುಡಿ ನವೀಕೃತ ಸ್ಮಶಾನ ಜಾಗ ಹಾಗೂ ಪ್ರಾರ್ಥನಾ ಮಂದಿರದ ಆಶೀರ್ವಚನವು ಬಲಿ ಪೂಜೆಯೊಂದಿಗೆ ನೆರವೇರಿತು.

ಬಲಿ ಪೂಜೆಯು ಪ್ರಾರಂಭಗೊಳ್ಳುವ ಮುನ್ನ ಕಾರ್ಯಕ್ರಮದ ಪ್ರಧಾನ ಧರ್ಮ ಗುರುಗಳಾಗಿ ಆಗಮಿಸಿದ ಮಂಗಳೂರಿನ ಮೊನ್ಸಿಜೋರ್ ಮ್ಯಾಕ್ಸಿಮ್ .ಎಲ್ ನೋರೊನ್ಹಾ ರವರಿಗೆ ಪುತ್ತೂರು ಚರ್ಚಿನ ಪ್ರಧಾನ ಧರ್ಮಗುರುಗಳಾದ ಲಾರೆನ್ಸ್ ಮಸ್ಕರೇನಸ್, ಸಹಾಯಕ ಧರ್ಮ ಗುರುಗಳಾದ ವಂದನೀಯ ಕೆವಿನ್ ಲಾರೆನ್ಸ್ ಡಿಸೋಜಾ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕಾಸ್ಟ, ಕಾರ್ಯದರ್ಶಿ ಎವ್ಲಿನ್ ಡಿಸೋಜಾ ರವರು ಹೂಗುಚ್ಛವನ್ನು ನೀಡುವ ಮುಖಾಂತರ ಸ್ವಾಗತವನ್ನು ಕೋರಿದರು.

ರಿಬ್ಬನನ್ನು ಕತ್ತರಿಸುವ ಮೂಲಕ ಪ್ರಾರ್ಥನಾ ಮಂದಿರದ ಉದ್ಘಾಟನೆಗೊಳಿಸಿದರು. ತದನಂತರ ಬಲಿ ಪೂಜೆಯನ್ನು ಅರ್ಪಿಸಿದರು.
ಲಾರೆನ್ಸ್ ಮಸ್ಕರೇನ್ಹಸ್ ಧರ್ಮ ಗುರುಗಳು ಪುತ್ತೂರು, ಸ್ಟ್ಯಾನಿ ಪಿಂಟೊ ಕ್ಯಾಂಪಸ್ ನಿರ್ದೇಶಕರು ಸಂತ ಫಿಲೋಮಿನಾ ಕಾಲೇಜು, ಪ್ರಕಾಶ್ ಮೊಂತೆರೋ ಪ್ರಾಂಶುಪಾಲರು ಸಂತ ಫಿಲೋಮಿನ ಪದವಿ ಕಾಲೇಜು ಪುತ್ತೂರು,ಅಶೋಕ್ ರಾಯನ್ ಕ್ರಾಸ್ತಾ ಪ್ರಾಂಶುಪಾಲರು ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಪುತ್ತೂರು, ವಂದನೀಯ ಡೆನ್ಜಿಲ್ ಲೋಬೋ ಮೊದಲಾದವರು ಬಲಿ ಪೂಜೆಯಲ್ಲಿ ಭಾಗವಹಿಸಿದರು.

ನವೀಕರಿಸಿದ ಪ್ರಾರ್ಥನಾ ಮಂದಿರ ಹಾಗೂ ಸಭಾಂಗಣವನ್ನು ಆಶೀರ್ವದಿಸಿ ದೇವರ ವಾಕ್ಯವನ್ನು ವಾಚಿಸಿ ಪ್ರತಿಯೊಬ್ಬ ಕ್ರೈಸ್ತನು ತನ್ನ ಕಷ್ಟಗಳನ್ನು ಎದುರಿಸಿ ಮೆಟ್ಟಿ ನಿಲ್ಲಲು ಶಕ್ತಿಯನ್ನು ತುಂಬುವುದೇ ಶಿಲುಬೆ ಹಾಗೂ ಮನುಷ್ಯನು ಕೆಟ್ಟ ಚಟಗಳಿಂದ ತನ್ನ ಜೀವನವನ್ನು ನಾಶಗೊಳಿಸಬಾರದೆಂದು ತನ್ನ ಪ್ರವಚನದಲ್ಲಿ ಮೊನ್ಸಿಜೋರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ ಹೇಳಿದರು.

ಬಲಿ ಪೂಜೆಯ ನಂತರ ಎಲ್ಲರನ್ನು ಲಾರೆನ್ಸ್ ಮಸ್ಕರೇನ್ಹಸ್ ಸ್ಮರಿಸಿದರು. ಚರ್ಚ್ ಪಾಲನ ಸಮಿತಿ ಮಂಡಳಿಯ ಕಾರ್ಯದರ್ಶಿ ಎವ್ಲಿನ್ ಡಿಸೋಜಾ ರವರು ನವೀಕರಿಸಿದ ಪ್ರಾರ್ಥನಾ ಮಂದಿರಕ್ಕೆ ಉದಾರ ದೇಣಿಗೆಯನ್ನು ನೀಡಿದವರ ಹೆಸರುಗಳನ್ನು ವಾಚಿಸಿದರು. ಅವರೆಲ್ಲರನ್ನು ಪ್ರಧಾನ ಧರ್ಮಗುರುಗಳು ಸನ್ಮಾನಿಸಿದರು.

ಎಲ್ಲರಿಗೂ ಸಹ ಭೋಜನವನ್ನು ಏರ್ಪಡಿಸಲಾಗಿತ್ತು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ತಾ, ಸಮಿತಿಯ ಸದಸ್ಯರು ಸಹಕರಿಸಿದರು.


























