ಬಂಟ್ವಾಳ: ತಾಲೂಕು ಕರಿಂಕ ಅನಂತಾಡಿ ಎಂಬಲ್ಲಿ ಬಿಯರ್ ಟಿನ್ ಮುಚ್ಚಳಕ್ಕೆ ಸಿಲುಕಿಕೊಂಡ ನಾಗರ ಹಾವೊಂದನ್ನು ಉರಗ ತಜ್ಞ ಪುತ್ತೂರಿನ ಬನ್ನೂರು ನಿವಾಸಿ ತೇಜಸ್ ರವರು ರಕ್ಷಣೆ ಮಾಡಿದ್ದಾರೆ.

ಅನಂತಾಡಿಯ ವಸಂತ ಗೌಡ ಎಂಬವರ ಜಾಗದಲ್ಲಿ ಬಿಯರ್ ಟಿನ್ ಮುಚ್ಚಳಕ್ಕೆ ನಾಗರ ಹಾವೊಂದು ಸಿಲುಕಿ ಒದ್ದಾಡುತ್ತಿತ್ತು.

ಈ ಬಗ್ಗೆ ಮಾಹಿತಿ ತಿಳಿದ ಉರಗ ತಜ್ಞ ತೇಜಸ್ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


























