ಪುತ್ತೂರು: ‘ಮುತ್ತಿನ ಒಡೆಯ ಶ್ರೀ ಮಹಾಲಿಂಗೇಶ್ವರ’ ಕನ್ನಡ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಮಣಿ ಆಚಾರ್ಯ ಪುತ್ತೂರು ರವರ ಸಾಹಿತ್ಯದಲ್ಲಿ, ಅಶ್ವಿನ್ ಪುತ್ತೂರು ರವರ ಸಂಗೀತದಲ್ಲಿ, ಚೇತನ್ ಪುತ್ತೂರು ಮತ್ತು ಚೈತ್ರಾ ಕಲ್ಲಡ್ಕ ರವರ ಕಂಠಸಿರಿಯಲ್ಲಿ ಮೂಡಿಬಂದಿರುವ ‘ಮುತ್ತಿನ ಒಡೆಯ ಶ್ರೀ ಮಹಾಲಿಂಗೇಶ್ವರ’ ಭಕ್ತಿಗೀತೆಯು ಅತೀ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದ್ದು, ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ರವೀಂದ್ರನಾಥ ರೈ, ಶೇಖರ ನಾರಾವಿ, ಮಣಿ ಆಚಾರ್ಯ ಪುತ್ತೂರು, ಲಕ್ಷ್ಮಣ ಆಚಾರ್ಯ, ಚಂದ್ರಾವತಿ, ಚೇತನ್ ಪುತ್ತೂರು, ಶಿವಂ ಕಂಪ್ಯೂಟರ್ಸ್ಸ್ ನ ಚಿನ್ಮಯ್, ಪ್ರಗತ್ ಶೆಟ್ಟಿ ಉಪಸ್ಥಿತರಿದ್ದರು.

ಈ ಹಾಡು ಅತೀ ಶೀಘ್ರದಲ್ಲಿ ‘ಚೇತನ್ ಪುತ್ತೂರು’ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ.



























