ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಬೆಳ್ತಂಗಡಿಯ ದೀಪಿಕಾ ರವರಿಗೆ ಪುತ್ತೂರಿನ ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲದ ಮಾರ್ಚ್ ತಿಂಗಳ ಸೇವಾ ಯೋಜನೆಯಡಿಯಲ್ಲಿ ಸಂಗ್ರಹವಾದ ಸಹಾಯಧನವನ್ನು ಹಸ್ತಾಂತರಿಸಲಾಯಿತು. 11,000 ರೂ. ಹಸ್ತಾಂತರಿಸಲಾಯಿತು.

ಬಂಟ್ವಾಳದ ಮೂಡೂರು ಪಡೂರು ಜೋಡುಕರೆ ಕಂಬಳದಲ್ಲಿ ‘ಭವತಿಭಿಕ್ಷಾಂದೇಹಿ’ ಪರಿಕಲ್ಪನೆಯಲ್ಲಿ ಈ ಧನಸಂಗ್ರಹ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ನವೀನ್ ಸಿಟಿಗುಡ್ಡೆ, ಕೃಷ್ಣಪ್ಪ ಕಲಾವಿದ, ಪದ್ಮನಾಭ ಉಪಸ್ಥಿತರಿದ್ದರು..

























