ಪುತ್ತೂರು : ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿ ನಾಪತ್ತೆಯಾಗಿದ್ದ ಚಿಕ್ಕಮುಡ್ನೂರು ಗ್ರಾಮದ ಪುಳುವಾರು ನಿವಾಸಿಯ ಮೃತದೇಹವು ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಲ್ ಎಂಬಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚಿಕ್ಕಮುಡ್ನೂರು ಗ್ರಾಮದ ಪುಳುವಾರು ನಿವಾಸಿ ಶಿವಪ್ಪ ಗೌಡ (45) ಮೃತರು.

ಶಿವಪ್ಪ ಗೌಡ ರವರು ಮಾ.17ಕ್ಕೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದು, ನಂತರ ವಾಪಸ್ಸು ಬಾರದೆ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಲ್ ಎಂಬಲ್ಲಿನ ಗುಡ್ಡದಲ್ಲಿ ಪತ್ತೆಯಾಗಿದೆ.

ಶಿವಪ್ಪ ವಿಪರೀತ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದು, ಇದರಿಂದಾಗಿ ಅವರ ಪತ್ನಿ ಮತ್ತು ಮಕ್ಕಳು ತವರು ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸ್ತವ್ಯ ಹೊಂದಿದ್ದಾರೆನ್ನಲಾಗಿದೆ.

























