ವಿಟ್ಲ: ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಏಪ್ರಿಲ್ 3 ರಿಂದ 8ರ ವರೆಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿದೆ.

ಶಿಬಿರದ ಉದ್ಘಾಟನೆಯನ್ನು ಶಾಲಾ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ, ನಿರ್ದೇಶಕ ಹಸನ್ ವಿಟ್ಲ, ನಿರ್ದೇಶಕ, ಮೋನಪ್ಪ ಶೆಟ್ಟಿ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ. ಎ , ಪ್ರಾಂಶುಪಾಲ ಜಯರಾಮ ರೈ, ಉಪಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ, ಹೇಮಲತ ಉಪಸ್ಥಿತರಿದ್ದರು.

ಒಟ್ಟು 171 ಶಿಬಿರಾರ್ಥಿಗಳನ್ನು ಕಿರಿಯ ಮತ್ತು ಹಿರಿಯ ವಿಭಾಗಗಳಾಗಿ ವಿಂಗಡಿಸಿ ಶಿಬಿರ ಆರಂಭಿಸಲಾಯಿತು. ಶಿಕ್ಷಕಿ ಭಾವನಾ ಸ್ವಾಗತಿಸಿ, ಸಹಶಿಕ್ಷಕಿ ಚಿತ್ರಲತಾ ಪ್ರಾರ್ಥಿಸಿದರು. ಶಿಕ್ಷಕಿ ವಿದ್ಯಾಶ್ರೀ ವಂದನಾರ್ಪಣೆಗೈದ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ರೂಪ ಸುರೇಶ್ ನೆರವೇರಿಸಿಕೊಟ್ಟರು. ಶಾಲಾ ಶಿಕ್ಷಕರು, ಬೋದಕೇತರರು, ಪೋಷಕರು ಉಪಸ್ಥಿತರಿದ್ದರು.



























