ಪುತ್ತೂರು: ಇತರರ ಹೆಸರು ಆರ್ಟಿಸಿಯಲ್ಲಿದ್ದರೂ ಸಹೋದರರಿಬ್ಬರು ಸೇರಿಕೊಂಡು ಸದ್ರಿ ಆಸ್ತಿಗಳ ಆಧಾರದಲ್ಲಿ ವಂಚನೆಯಿಂದ ಸಾಲಪಡೆದುಕೊಂಡು ಹಣಕಾಸಿನ ಅಕ್ರಮ, ಮೋಸ, ವಂಚನೆ ಹಾಗೂ ಅಧಿಕಾರ ದುರುಪಯೋಗಪಡಿಸಿರುವುದಾಗಿಆರೋಪಿಸಿ ಮಹಿಳೆಯೋರ್ವರು ನೀಡಿರುವ ದೂರಿನ ಮೇರೆಗೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಅವರ ಸಹೋದರ ಚಂದ್ರಶೇಖರ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನೂರು ಗ್ರಾಮದ ಶ್ರೀ ದೇವಿಅನಿಲಕೋಡಿ ದಿ.ಅನಂತೇಶ್ವರ ಭಟ್ಎಂಬವರ ಮಗಳು ವಸಂತಲಕ್ಷ್ಮೀಯಾನೆ ವಸಂತಿ (63) ರವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಪಡ್ನೂರು ಗ್ರಾಮದ ಸರ್ವೆ ನಂ.95/1, 96/4, 96/30, 97/10, 113/4,97/2,97/10,96/30,113/3,95/2,95/6,95/5,95/4,96/3ಅ95/3ಮತ್ತು 3/1 ಹಾಗೂ ಕಬಕ ಗ್ರಾಮದ ಸರ್ವೆ ನಂ. 96/20ರಲ್ಲಿ ಜಮೀನನ್ನು ಹೊಂದಿದ್ದು, ಸದ್ರಿ ಜಮೀನಿನಲ್ಲಿ ನನಗೆ ಮತ್ತು ನನ್ನ ತಾಯಿ, ತಮ್ಮಂದಿರಿಗೆ 31/108 ಅಂಶದ ಹಕ್ಕು ಇರುವುದಾಗಿ ಎಡಿಷನಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ತೀರ್ಮಾನ ಆಗಿರುತ್ತದೆ.
ಈ ತೀರ್ಪಿನ ವಿರುದ್ಧ ಈಶ್ವರ ಭಟ್ ಪಂಜಿಗುಡ್ಡೆ 5ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯು ವಜಾಗೊಂಡಿರುತ್ತದೆ. ಸದ್ರಿ ಡಿಕ್ರಿಯ ಪ್ರಕಾರ ಆರ್‌ಟಿಸಿಯಲ್ಲಿ ನನ್ನ ಮತ್ತು ತಮ್ಮಂದಿರು,ತಾಯಿಯ ಹೆಸರು ನಮೂದು ಇರುತ್ತದೆ. 2022ನೇ ಮೇ ತಿಂಗಳಿನಲ್ಲಿ ಜಮೀನಿನ ದಾಖಲಾತಿಗಳನ್ನು ತಾನು ಪರಿಶೀಲಿಸಿದಾಗ ಬನ್ನೂರು ರೈತರ ಸೇವಾ ಸಹಕಾರಿ ಸಂಘ ಮತ್ತುbಕಾರ್ಪೊರೇಶನ್ ಬ್ಯಾಂಕ್ ಬೊಳ್ವಾರ್ ಶಾಖೆ (ಈಗಿನ ಯೂನಿಯನ್ ಬ್ಯಾಂಕ್)ಯಲ್ಲಿ ಸದ್ರಿ ಆಸ್ತಿಗಳ ಆಧಾರದಲ್ಲಿ ಇಬ್ಬರು ತಮ್ಮ ಹೆಸರಿನಲ್ಲಿ ಸಾಲಗಳನ್ನು ಪಡೆದುಕೊಂಡಿರುವುದು ಕಂಡು ಬಂದಿರುತ್ತದೆ. ಪ್ರಸ್ತುತ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷನಾಗಿದ್ದು, ಈ ಹಿಂದೆ ನಿರ್ದೇಶಕನಾಗಿ ಹಾಗೂ ಉಪಾಧ್ಯಕ್ಷನಾಗಿ ಹಲವಾರು ವರ್ಷಗಳಿಂದ ಇದ್ದ ಈಶ್ವರ ಭಟ್ ತನ್ನ ಪ್ರಭಾವ ಬಳಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮೋಸಹಾಗೂ ವಂಚನೆಯಿಂದ ಸಾಲ ಪಡೆದುಕೊಂಡಿರುವುದಾಗಿದೆ.
ಈ ಕುರಿತು ತಾನು ವಕೀಲರ ಮೂಲಕ ಈ ಹಿಂದೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಗೊಪಾಲಕೃಷ್ಣ ಭಟ್ ಮತ್ತು ಕಾರ್ಪೋರೇಶನ್ ಬ್ಯಾಂಕ್ ಬೊಳ್ವಾರ್ ಶಾಖೆ ಇದರವ್ಯವಸ್ಥಾಪಕರಾಗಿದ್ದ ಭವೇಶ್ ರವರಿಗೆ ಪತ್ರ ವ್ಯವಹಾರ ಮಾಡಿದಾಗ ಅವರುಗಳೂ ಸತ್ಯವನ್ನುಮರೆಮಾಚಿರುತ್ತಾರೆ. ಇವರೆಲ್ಲರೂ ಹಣಕಾಸಿನ ಅಕ್ರಮ, ಮೋಸ, ವಂಚನೆ ಹಾಗೂ ಅಧಿಕಾರದುರುಪಯೋಗಪಡಿಸಿದ ಅಪರಾಧ ಎಸಗಿರುತ್ತಾರೆ ಎಂದು ವಸಂತಲಕ್ಷ್ಮೀ ಯಾನೆ ವಸಂತಿಯವರು ಪುತ್ತೂರು ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ವಸಂತಲಕ್ಷ್ಮೀ ಅವರು ನೀಡಿರುವ ದೂರಿನ ಮೇರೆಗೆ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಅವರ ಸಹೋದರಚಂದ್ರಶೇಖರ ಎಂಬವರ ವಿರುದ್ಧ ಕಲಂ 217, 417, 419, 420, 463, 464, 465, 467, 468,469,471 ಜೊತೆಗೆ 34 ಐ.ಪಿ.ಸಿಯಡಿ ಪ್ರಕರಣ ದಾಖಲಾಗಿದೆ.


























