ಪುತ್ತೂರು : ಸಹೋದರರಿಬ್ಬರು ಸೇರಿಕೊಂಡು ಆರ್.ಟಿ.ಸಿ ಯಲ್ಲಿ ಇತರರ ಹೆಸರಿದ್ದರೂ ಸದ್ರಿ ಅಸ್ತಿಗಳ ಆಧಾರದಲ್ಲಿ ಹಣಕಾಸಿನ ಅಕ್ರಮ, ಮೋಸ, ವಂಚನೆ ಹಾಗೂ ಅಧಿಕಾರ ದುರುಪಯೋಗಪಡಿಸಿರುವುದಾಗಿ ಮಹಿಳೆ ಆರೋಪಿಸಿ ಠಾಣೆಗೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರು ಸ್ಪಷ್ಟನೆ ನೀಡಿದ್ದಾರೆ.
‘ನಮ್ಮ ಮತ್ತು ವಸಂತಲಕ್ಷ್ಮೀಯವರ ಮೇಲೆ ಸುಮಾರು 53 ವರುಷಗಳಿಂದ ಸಿವಿಲ್ ವ್ಯಾಜ್ಯವಿದ್ದು, ಇದೀಗ ಕೋರ್ಟ್ ನಲ್ಲಿ ತನಿಖಾಹಂತದಲ್ಲಿದೆ. ವೈಯಕ್ತಿಕ ದ್ವೇಷದಿಂದ ನಮ್ಮ ವಿರುದ್ಧ ಈ ರೀತಿಯಾಗಿ ಸುಳ್ಳು ಆರೋಪ ಮಾಡಿರುತ್ತಾರೆ.
ನಾವು ಬನ್ನೂರು ಸೊಸೈಟಿ ಮತ್ತು ಬ್ಯಾಂಕ್ ನಿಂದ ಯಾವುದೇ ಮೋಸದಿಂದ ಸಾಲ ತೆಗೆಯಲಿಲ್ಲ. ಇಂತಹ ಸುಳ್ಳು ಆರೋಪವನ್ನು ಹಲವಾರು ವಿಷಯಗಳಲ್ಲಿ ಮಾಡಿರುತ್ತಾರೆ. ಇದಕ್ಕೆ ನಾವು ಕಾನೂನು ಹೋರಾಟವನ್ನು ಮಾಡುತ್ತೇವೆ’ ಎಂದು ಈಶ್ವರ ಭಟ್ ರವರು ಪ್ರತಿಕ್ರಿಯಿಸಿದ್ದಾರೆ.


























