ಪುತ್ತೂರು: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ ಜ.ಪಂ ಕ್ಷೇತ್ರ ಶಿಕ್ಷಣಾಧಿಕಾರಿ ಯವರ ಕಚೇರಿ ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿ ಇದರ ವತಿಯಿಂದ ಏಪ್ರಿಲ್ 6 ರಿಂದ ಏಪ್ರಿಲ್ 8ರ ತನಕ ಮೂರು ದಿನಗಳ ಕಾಲ ಬಣ್ಣದ ಬಣ್ಣ ಎಂಬ ವಿಶಿಷ್ಟ ಮಕ್ಕಳ ಶಿಬಿರವು ಸದರಿ ಶಾಲೆಯಲ್ಲಿ ಜರುಗಲಿದೆ.
ಶಿಬಿರವನ್ನು ಕರ್ನಾಟಕದ ಹಿರಿಯ ಶಿಕ್ಷಣ ಚಿಂತಕ ಸ್ವರೂಪ ಅಧ್ಯಯನ ಕೇಂದ್ರ ಮಂಗಳೂರು ಇದರ ಸಂಚಾಲಕ ಕಲಾನಿಧಿ ಗೋಪಾಡ್ಕರ್ ರವರು ಉದ್ಘಾಟಿಸಲಿದ್ದು, ಹಿರಿಯ ರಂಗ ಲೇಖಕ, ಸರಕಾರಿ
ಪದವಿ ಮಹಾವಿದ್ಯಾಲಯ ಉಪ್ಪಿನಂಗಡಿಯ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಮುಕ್ತಾಯದ ಮಾತುಗಳನ್ನಾಡಲಿದ್ದಾರೆ.
ಶಿಬಿರದಲ್ಲಿ ವಿಶೇಷ ಅತಿಥಿಗಳಾಗಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ಆರ್, ಸವಣೂರಿನ ಸಮೂಹ ಸಂಪನ್ ವ್ಯಕ್ತಿ ಕುಶಾಲಪ್ಪ ಹಾಗೂ ಗೌರವತಿಥಿಗಳಾಗಿ ಪಿ ಡಿ ಗಂಗಾಧರ್ ರೈ ಕೃಷ್ಣಕುಮಾರ್ ರೈ ಪುಂಚಪಾಡಿ, ವಿಷ್ಣು ಭಟ್ ಅಜಿಲೋಡಿ, ಕುಶಲ ಪಿ ರೈ ಪುಂಚಪಾಡಿ, ಪಿ ಡಿ ಕೃಷ್ಣಕುಮಾರ್ ರೈ, ಸುಜಯ ಕೆ ಸುಲಾಯ, ವಿಶಾಖ್ ರೈ ತೋಟತಡ್ಕ ಮುಂತಾದವರು ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಕಥೆಗೊಂದು ಪಾತ್ರ ಹಾಡಿಗೊಂದು ಹೆಜ್ಜೆ ರಂಗಕ್ಕೊಂದು ರಾಗ ಚಿತ್ರಕೊಂದು ಬಣ್ಣ ಕಾಗದಕೊಂದು ಕ್ರಾಫ್ಟ್ ಕಸಕ್ಕೊಂದು ರೂಪ ಅಗ್ನಿಶಾಮಕ ಮಾಹಿತಿ ಆರೋಗ್ಯ ಜಾಗೃತಿ ಹೀಗೆ ಬೇರೆ ಬೇರೆ ವಿಷಯಗಳ ಕಲಿಕೆ ನಡೆಯಲಿದ್ದು, ಕಲಾ ಶಿಕ್ಷಕರಾದ ಪದ್ಮನಾಭ ಬೆಳ್ಳಾರೆ, ಯುವ ರಂಗ ನಿರ್ದೇಶಕರಾದ ಉದಯ ಸಾರಂಗ್, ಹಕ್ಕಿತಜ್ಞರಾದ ಅರವಿಂದ ಕುಡ್ಲ ಕರಕುಶಲ ಶಿಕ್ಷಕರಾದ ಬಕುಳ, ಚಿತ್ರ ಕಲಾವಿದರಾದ ಪ್ರಜಿತ್ ರೈ ಸೂಡಿ ಮುಳ್ಳು ತೇಜಸ್ವಿ ದೀಪ್ತಿ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಾಯತ್ರಿ ಓಂತಿಮನೆ ಹಾಗೂ ಮುಖ್ಯ ಗುರುಗಳಾದ ರಶ್ಮಿತಾ ನರಿಮೊಗರು ರವರು ತಿಳಿಸಿದ್ದಾರೆ.




























