ಪುತ್ತೂರು ಕಳೆದ 9 ವರ್ಷಗಳಿಂದ Seven Star Guys ಪುತ್ತೂರು ಎಂಬ ಹೆಸರಿನಲ್ಲಿ ಹತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಂತಹ ತಂಡ ಇದೀಗ ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡು ಐಕ್ಯ ಕಲಾ-ಸೇವಾ ಟ್ರಸ್ಟ್ (ರಿ.) ಎಂಬ ಮರುನಾಮಕರಣದೊಂದಿಗೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮಿಷನ್ ಮೂಲೆ, ಮೊಟ್ಟೆತ್ತಡ್ಕ ಕ್ಷೇತ್ರದಲ್ಲಿ ಉದ್ಘಾಟನೆಗೊಂಡಿದೆ.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಮುಕ್ತೆಸರರಾದ ಶ್ರೀ ರಮೇಶ್ ರೈ ಮಿಷನ್ ಮೂಲೆ, ಅಧ್ಯಕ್ಷ ರಾದ ಶ್ರೀ ರಾಮಶೆಟ್ಟಿ, ಕಾರ್ಯದರ್ಶಿ ಶೇಖರ್ ಕೆ. ಬಿ , ವಿಶ್ವನಾಥ ರೈ ಮಿಷನ್ ಮೂಲೆ, ತನಿಯಪ್ಪ ಸುವರ್ಣ, ಬಾಲಕೃಷ್ಣ ರೈ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟ್ ನ ಪದಾಧಿಕಾರಿಗಳಾಗಿ ಆಯ್ಕೆ:
ಸಂಚಾಲಕರಾಗಿ ಅವಿನಾಶ್. ವಿ. ಆರ್, ಅಧ್ಯಕ್ಷರಾಗಿ ಚೇತನ್ ಕುಮಾರ್, ಉಪಾಧ್ಯಕ್ಷರಾಗಿ ಉತ್ತೇಶ್. ಬಿ, ಕಾರ್ಯದರ್ಶಿಯಾಗಿ ಕೆ. ಕಾರ್ತಿಕ್, ಜೊತೆಕಾರ್ಯದರ್ಶಿಯಾಗಿ ಅಭಿಷೇಕ್ ಶೆಟ್ಟಿ, ಕೋಶಾಧಿಕಾರಿಯಾಗಿ ದಕ್ಷಿತ್ ಎಸ್. ಎಂ. ಆಯ್ಕೆಯಾದರು.

ಕೀರ್ತನ್ ಕೆ, ದೀಕ್ಷಿತ್ ಡಿ. ಬಿ, ಸಚಿನ್ ಕುಮಾರ್, ಶ್ರೀಧರ್ ಎಸ್, ಪುನೀತ್ ಕೆ,ಪ್ರಜ್ವಲ್ ಭಂಡಾರಿ, ಆದರ್ಶ್, ಕೆ ದೀಕ್ಷಿತ್ ಕುಮಾರ್, ಅನುಷಾ ವಿ.ಆರ್, ಕಾವ್ಯ ಮಿಥುನ್, ಪ್ರಿಯಾಂಕಾ, ಕಾವ್ಯ ಚೇತನ್ ಈ ಟ್ರಸ್ಟ್ ನ ಸದಸ್ಯರಾಗಿದ್ದಾರೆ.


























