ಪುತ್ತೂರು : ಮಟ್ಕ ಚೀಟಿ ಬರೆದು ಜೂಜಾಟ ಆಡಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರು ಸ್ಟೇಟ್ ಬ್ಯಾಂಕ್ ಸಮೀಪದ ಮಾಧುರಿ ಸೌಧದ ಬಳಿ ನಡೆದಿದೆ.
ಪುತ್ತೂರು ಕೋರ್ಟ್ ರಸ್ತೆಯ ಅನಂತೇಶ್ವರ ಕೃಪಾ ಬಿಲ್ಡಿಂಗ್ ನಿವಾಸಿ ಸಚಿನ್ ಭಟ್ (38) ಬಂಧಿತ ಆರೋಪಿ.
ಪುತ್ತೂರು ನಗರ ಠಾಣೆಯ ಉಪನಿರೀಕ್ಷಕರಾದ ಶ್ರೀಕಾಂತ್ ರಾಥೋಡ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಚೀಟಿಗಳನ್ನು,1 ಪೆನ್ನು ಒಟ್ಟು 3805/- ರೂ ವಶ ಪಡಿಸಿ ಕೊಳ್ಳಲಾಗಿದೆ.

























