ಹೊಸತನದ ಹುಡುಕಾಟದ ಕಲಿಕೆಯೇ ಹಿಂದಿನ ಅಗತ್ಯ ಎಂದು ಕರ್ನಾಟಕದ ಹಿರಿಯ ಶೈಕ್ಷಣಿಕ ಚಿಂತಕ ಕಲಾ ನಿಧಿ ಗೋಪಾಡ್ಕರ್ ಮಂಗಳೂರು ಹೇಳಿದರು.
ಅವರು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಫಾಡಿ ಇಲ್ಲಿ ನಡೆದ ಮೂರು ದಿನಗಳ ಮಕ್ಕಳರಂಗ ಶಿಬಿರ ಬಣ್ಣದ ಬಣ್ಣ ವನ್ನು ಶುಭಾರಂಭಗೊಳಿಸಿ ಮಾತನಾಡಿದರು.

ಕಲಿಕೆ ಎನ್ನುವುದು ಮಕ್ಕಳ ಮನಸ್ಸಿನ ಹುಡುಕಾಟ ಮಕ್ಕಳ ಸ್ವತಹ ಅನುಭವಿಸಿದಾಗ ಮಾತ್ರ ಕಲಿಕೆ ಉಂಟಾಗಲು ಸಾಧ್ಯ ಅನು ಭವದ ಸಾಧ್ಯತೆಯನ್ನು ಮಕ್ಕಳ ಮುಂದೆ ತೆರೆದಿಡುವುದೇ ಕಲಿಕೆಯ ಸಾಧ್ಯತೆ ಇಂತಹ ಮಕ್ಕಳ ಶಿಬಿರಗಳು ಹೊಸತನದ ಹುಡುಕಾಟಕ್ಕೆ ದಾರಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ ಸೃಜನಶೀಲತೆ ಎನ್ನುವುದೇ ಕಲಿಕೆಯ ಮೂಲ ಎಲ್ಲ ಮಕ್ಕಳನ್ನು ಸೃಜನಶೀಲರನ್ನಾಗಿಸುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ ವಾಗಬೇಕು ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಸವಣೂರು ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ಬಿ. ಮಾತನಾಡಿ ಅನುಭವದ ಕಲಿಕೆಯನ್ನು ನೀಡುವುದು ಶಾಲಾ ಪಠ್ಯದ ಮೂಲ ಮಂತ್ರವಾಗಬೇಕು ಎಂದು ಹೇಳಿದರು
ಅತಿಥಿಗಳಾಗಿ ಭಾಗವಹಿಸಿದ ಕೃಷ್ಣಕುಮಾರ್ ರೈ ಮಾತನಾಡಿ, ಶಾಲೆಗಳು ಮಕ್ಕಳ ಚಟುವಟಿಕೆಯ ಕೇಂದ್ರಗಳಾಗಬೇಕು ಆಗಾಗ ವಿಭಿನ್ನ ವಿಶೇಷ ಚಟುವಟಿಕೆಗಳು ಶಾಲೆಗಳಲ್ಲಿ ನಡೆಯುತ್ತಿರಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಕುಶಲ ಪಿ ರೈ ಪುಣ್ಚಪ್ಪಾಡಿ, ವಿಶಾಖ್ ರೈ ತೋಟತ್ತಡ್ಕ, ಎಸ್.ಡಿ.ಎಮ್.ಸಿ. ಸದಸ್ಯೆ ಕಾವೇರಿ ಅಜಿಲೋಡಿ ಮುಂತಾದವರು ಉಪಸ್ಥಿತರಿದ್ದರು.
ಹರಡಿದ ಬಾಳೆ ಎಲೆಯಲ್ಲಿ ಪುಷ್ಪದ ಹೆಸರುಗಳಿಂದ ಬಣ್ಣದ ಬಣ್ಣ ಎಂಬ ಅಕ್ಷರಗಳನ್ನು ಮೂಡಿಸುವುದರ ಮೂಲಕ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪ್ರಾರ್ಥಿಸಿದರು. ಶಾಲಾ ಮುಖ್ಯ ಗುರುಗಳಾದ ರಶ್ಮಿತಾ ನರಿಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪದವೀಧರ ಶಿಕ್ಷಕಿ ಫ್ಲಾವಿಯಾ ಧನ್ಯವಾದ ಸಲ್ಲಿಸಿದರು. ಅತಿಥಿ ಶಿಕ್ಷಕಿಯಾದ ಚಂದ್ರಿಕಾ ಗೌರವ ಶಿಕ್ಷಕಿಯಾದ ತೃಪ್ತಿ ಇವರುಗಳು ಸಹಕರಿಸಿದರು.

ಕಾರ್ಯಕ್ರಮದ ವಿಶೇಷತೆಗಳು :
ವಿಭಿನ್ನವಾಗಿ ಹೂ ಬರೆವಣಿಗೆಯ ಮೂಲಕ ಉದ್ಘಾಟನೆ, ವಿಶಿಷ್ಟವಾದ ರಂಗವೇದಿಕೆಯನ್ನು ಗೂಡು ದೀಪ, ಮುಖವಾಡ, ಬಣ್ಣದ ಗ್ಲಾಸ್, ಗೆರಟೆಗಳಿಂದ ಅಲಂಕಾರ, ಮಧ್ಯಾಹ್ನ ವಿಶೇಷ ದೇಸಿ ಭೋಜನವನ್ನು ತಯಾರಿಸಲಾಗಿತ್ತು.



























