ಪುತ್ತೂರು : ವಿಭಾಗದ ಕೆ.ಎಸ್.ಆರ್.ಟಿ.ಸಿ ಡ್ರೈವರ್ ಮೃತದೇಹ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಪತ್ತೆಯಾದ ಘಟನೆ ಎ.7 ರಂದು ನಡೆದಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ನ ಡ್ರೈವರ್ & ಕಂಡಕ್ಟರ್ ಆಗಿರುವ ಕುಸುಮಾಧರ ಗೌಡ ಅಭೀರ (34) ಮೃತರು.

ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಘಟನೆ ನಡೆದಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸುಮಾರು 8 ವರುಷಗಳಿಂದ ಕೆ.ಎಸ್.ಆರ್.ಟಿ.ಸಿ ಉದ್ಯೋಗಿಯಾಗಿದ್ದ ಕುಸುಮಾಧರ ರವರು ಕಳೆದ ಒಂದು ವರುಷದ ಹಿಂದೆ ಮದುವೆಯಾಗಿದ್ದರು.
ಈ ಬಗ್ಗೆ ಬೆಳ್ಳಾರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..

























