ಪುತ್ತೂರಿನ ಹೃದಯ ಭಾಗದಲ್ಲಿ ಇರುವ ಮಾಯಿ ದೆ ದೇವುಸ್ ಚರ್ಚಿನಲ್ಲಿ ಪವಿತ್ರ ಗುರುವಾರವನ್ನು ಆಚರಿಸಲಾಯಿತು.

ಪ್ರಪಂಚದಾದ್ಯಂತದ ಕ್ರಿಶ್ಚಿಯನ್ನರು ಈ ವಾರವನ್ನು ಪವಿತ್ರ ವಾರವನ್ನಾಗಿ ಆಚರಿಸುತ್ತಿದ್ದು, ಏಪ್ರಿಲ್ 2 ರಂದು ಈಸ್ಟರ್ ಮೊದಲು ಗರಿಗಳ ಭಾನುವಾರದಿಂದ ಪ್ರಾರಂಭವಾಗುತ್ತದೆ. ಏಪ್ರಿಲ್ 6 ರಂದು ಅವರು ಶುಭ ಶುಕ್ರವಾರ ಮತ್ತು ಈಸ್ಟರ್ ಮೊದಲು ಬರುವ ಪವಿತ್ರ ಗುರುವಾರವನ್ನು ಆಚರಿಸುತ್ತಾರೆ.

ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಯೇಸು ತನ್ನ ಶಿಷ್ಯರೊಂದಿಗೆ ಊಟ ಮಾಡಿದ ಕೊನೆಯ ಭೋಜನವನ್ನು ಈ ದಿನವು ಗುರುತಿಸುತ್ತದೆ. ನಾವೆಲ್ಲರೂ ಸಮಾನರು ಎಂಬುದರ ಸಂಕೇತವಾಗಿ ನಾವು ವಿನಮ್ರರಾಗಿರಬೇಕು ಮತ್ತು ಪರಸ್ಪರರ ಪಾದಗಳನ್ನು ತೊಳೆಯುದರ ಮೂಲಕ ಸೇವಾ ಮನೋಭಾವನೆಗೆ ಸಿದ್ಧರಾಗಿರಬೇಕು ಎಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದ ಪಾಠವನ್ನು ಸಹ ಇದು ನೆನಪಿಸುತ್ತದೆ. ಈ ಸಂಪ್ರದಾಯವನ್ನು ಮುಂದುವರೆಸುತ್ತಾ, ಪ್ರಪಂಚಾದ್ಯಂತ ಎಲ್ಲಾ ಚರ್ಚುಗಳಲ್ಲಿ ಪಶ್ಚಾತ್ತಾಪದ ವಿಧಿ, ಪಾದ ಸ್ನಾನದ ವಿಧಿ, ಪರಮ ಪ್ರಸಾದ ವಿಧಿ ಹಾಗೂ ಪರಮ ಪ್ರಸಾದ ಪ್ರತಿಷ್ಠಾಪನೆ ಮತ್ತು ಆರಾಧನೆ ವಿಧಿಗಳನ್ನು ಆಚರಿಸಲಾಗುತ್ತದೆ.
ಪ್ರದಾನ ಧರ್ಮಗುರುಗಳಾಗಿ ಸ್ಟ್ಯಾನಿ ಪಿಂಟೊ ರವರು ಬಲಿ ಪೂಜೆಯನ್ನು ನೆರವೇರಿಸಿದರು. ಕ್ರಿಸ್ತರ ಪ್ರತಿನಿಧಿಯಾಗಿ ಲಾರೆನ್ಸ್ ಮಸ್ಕರೇನ್ಹಸ್ ರವರು ಧರ್ಮ ಕೇಂದ್ರದ ವಿವಿಧ ವರ್ಗಗಳಿಂದ ಆರಿಸಲ್ಪಟ್ಟ ಹನ್ನೆರಡು ಮಂದಿಯ ಪಾದಗಳನ್ನು ತೊಳೆಯುದರ ಮೂಲಕ ಪರಸೇವೆ, ಪರಸ್ನೇಹ, ದೀನತೆಯ ಮಹತ್ವವನ್ನು ತಿಳಿಸಿದರು.

ತಮ್ಮ ಪ್ರವಚನದಲ್ಲಿ ಬಲಿಪೂಜೆಯ ಮಹತ್ವವನ್ನು ಹಾಗೂ ಯಾಜಕಿ ದೀಕ್ಷೆಯ ದಿನದ ಮಹತ್ವವನ್ನು ಹೇಳಿದರು, ಸಹಾಯಕ ಧರ್ಮಗುರುಗಳಾದ ಕೆವಿನ್ ಲಾರೆನ್ಸ್ ಡಿಸೋಜಾ ರವರು ಪರಮ ಪ್ರಸಾದದ ಪ್ರತಿಷ್ಠಾಪನೆ ಮತ್ತು ಆರಾಧನೆಯನ್ನು ನಡೆಸಿಕೊಟ್ಟರು. ಅಶೋಕ್ ರಾಯನ್ ಕ್ರಾಸ್ತಾ ರವರು ವಿವಿಧ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಯೇಸುವಿನ ಕೊನೆಯ ಭೋಜನದ ಸಂಕೇತವಾಗಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ರೊಟ್ಟಿಯನ್ನು ವಿತರಿಸಲಾಯಿತು.



































